ಇದು ಸ್ಮಶಾನಕ್ಕೆ ದಾರಿ ತೋರುವ ಸರ್ಕಾರ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಅಸಮರ್ಥ ಸರ್ಕಾರದ ಅನರ್ಹ ಮಂತ್ರಿಗಳು ಸೇರಿ ಎಷ್ಟು ಸಭೆಗಳನ್ನು ನಡೆಸಿದರೇನು ಎಲ್ಲವೂ ವ್ಯರ್ಥವೇ. ಹತ್ತಾರು ಸಭೆಗಳನ್ನು ನಡೆಸಿ ಪರಸ್ಪರ ಕಿತ್ತಾಡಿದ್ದು ಬಿಟ್ಟರೆ ಇನ್ಯಾವ ಲಾಭವೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದೆ,
ಮುಖ್ಯಮಂತ್ರಿ ಅವರೇ, ಉಸ್ತುವಾರಿ ಮಂತ್ರಿಗಳನ್ನು ಆಯಾ ಜಿಲ್ಲೆಗಳಲ್ಲೇ ಠಿಕಾಣಿ ಹೂಡಿಸಿ, ಪ್ರತಿ ಕುಂದು ಕೊರತೆಗಳನ್ನು ನಿಭಾಯಿಸುವಂತೆ ಆದೇಶ ಹೊರಡಿಸಿ.
ಆಶಾ ಕಾರ್ಯಕರ್ತೆಯರ ಮೂಲಕ ಹಳ್ಳಿಗಳಿಗೆ ತೆರಳಿದವರನ್ನು ಗುರುತಿಸಿ ಟೆಸ್ಟ್ ಮಾಡಿಸಿ, ಐಸೋಲೇಶನ್ ವ್ಯವಸ್ಥೆ ಮಾಡಿ. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿನ ಸ್ಥಿತಿಗತಿಯ ವರದಿ ಪಡೆಯಿರಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ.

ನಾವು ಈ ಹಿಂದೆಯೇ ಜಿಲ್ಲಾ ಕೇಂದ್ರಗಳತ್ತ ಗಮನ ಹರಿಸಿ ಎಂದು ಎಚ್ಚರಿಸಿದ್ದೆವು, ಸರ್ಕಾರ ಎಚ್ಚರಗೊಳ್ಳದ ಪರಿಣಾಮ ಈಗ ರಾಜ್ಯಾದ್ಯಾಂತ ಬೆಂಗಳೂರಿನ ಸ್ಥಿತಿಯೇ ನಿರ್ಮಾಣವಾಗಿ ಎಲ್ಲೆಡೆಯಿಂದಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಆಕ್ಸಿಜನ್, ಬೆಡ್, ಔಷಧಗಳಿಲ್ಲದ ಸುದ್ದಿಗಳು ಬರತೊಡಗಿದೆ.
ಮೂಲಸೌಕರ್ಯಗಳಿಲ್ಲದ ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ದೂರಿದೆ.

ಸರ್ಕಾರ ಲಾಕ್‌ಡೌನ್ ಒಂದೇ ಮದ್ದು ಎಂದು ನಂಬಿಕೊಂಡಂತಿದೆ, ಪೂರ್ವ ತಯಾರಿ, ಸ್ಪಷ್ಟ ಕಾರ್ಯತಂತ್ರವಿಲ್ಲದ ಏಕಾಏಕೀಯ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು.
ಸೂಕ್ತ ತಪಾಸಣೆ, ಐಸೋಲೇಶನ್, ಚಿಕಿತ್ಸೆಯ ವ್ಯವಸ್ಥೆ ಮಾಡದ ಪರಿಣಾಮ ಈಗ ಜಿಲ್ಲಾ ಕೇಂದ್ರಗಳಲ್ಲೂ ಸೋಂಕು ಉಲ್ಬಣಗೊಳ್ಳುತ್ತಿದೆ. ಸರ್ಕಾರ ನಡೆಸುವ ಸಭೆಗಳಲ್ಲಿ ಗಂಭೀರತೆ ಇದ್ದಿದ್ದರೆ ಕೊರತೆಗಳು ಉಳಿಯುತ್ತಿರಲಿಲ್ಲ, 24 ಬಲಿಯಾಗುತ್ತಿರಲಿಲ್ಲ.
ಎಷ್ಟೇ ಆದರೂ ಸ್ಮಶಾನಕ್ಕೆ ದಾರಿ ತೋರುವ ಸರ್ಕಾರವಲ್ಲವೇ ಇದು ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು