‘ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿನ್ನು ನಿಮ್ಮನ್ನು ಭೇಟಿಯಾಗದೇ ಹೋಗಬಹುದು’ ಎಂದು ಫೇಸ್ಬುಕ್ ಸ್ಟೇಟಸ್ ಹಾಕಿದ್ದ ವೈದ್ಯೆ ಕೋವಿಡ್ ತಗುಲಿ ಮೃತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ‘ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ವೇದಿಕೆಯಲ್ಲಿನ್ನು ನಿಮ್ಮನ್ನು ಭೇಟಿಯಾಗದೇ ಹೋಗಬಹುದು. ಎಲ್ಲರೂ ಎಚ್ಚರಿಕೆಯಿಂದಿರಿ. ದೇಹವು ಸಾಯುತ್ತೆ. ಆತ್ಮವು ಸಾಯುವುದಿಲ್ಲ. ಆತ್ಮವು ಅಮರ‘ – ಹೀಗೆಂದು ಸ್ಟೇಟಸ್ ಹಾಕಿದ ಮಹಾರಾಷ್ಟ್ರದ ವೈದ್ಯೆಯೊಬ್ಬರು ಕೋವಿಡ್ ತಗುಲಿ ಅಸುನೀಗಿದ್ದಾರೆ.

ಮಹಾರಾಷ್ಟ್ರದ ಸೆವ್ರಿ ಟಿಬಿ ಆಸ್ಪತ್ರೆಯ ವೈದ್ಯರಾದ ಮನೀಷಾ ಜಾಧವ್ ಎಂಬವರೇ ರೀತಿ ಫೇಸ್ಬುಕ್ ಸ್ಟೇಟಸ್ ಹಾಕಿದವರು. ಐಸಿಯುವಿನಲ್ಲಿದ್ದು ಕೊಂಡೇ ತನ್ನ ಕಟ್ಟ ಕಡೆಯ ಫೇಸ್ಬುಕ್ ಪೋಸ್ಟ್ ಹಾಕಿದ 36 ಗಂಟೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಭಾನುವಾರದಂದು ಸ್ಟೇಟಸ್ ಹಾಕಿದ ವೈದ್ಯೆ ಸೋಮವಾರದಂದು ಸಾವಿಗೆ ಶರಣಾಗಿದ್ದಾರೆ. ಇವರು ಸೆವ್ರಿ ಟಿಬಿ ಆಸ್ಪತ್ರೆಯ ಹಿರಿಯ ಉದ್ಯೋಗಿಯಾಗಿದ್ದು, ಆಸ್ಪತ್ರೆಯ ಕೆಲಸ ಕಾರ್ಯಗಳಲ್ಲಿ ಹೆಚ್ಚು ಆಸ್ಥೆಯಿಂದ ದುಡಿಯುತ್ತಿದ್ದರೆನ್ನಲಾಗಿದೆ. ಮರಣ ಹೊಂದಿದ ವಾರ್ತೆಯು ಬಿತ್ತರವಾಗುತ್ತಿದ್ದಂತೆ ಜನರು ತಮ್ಮ ದುಃಖವನ್ನು ವ್ಯಕ್ತಪಡಿಸಿ ಅವರ ಫೇಸ್ಬುಕ್ ಖಾತೆಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ 18000 ಕ್ಕೂಹೆಚ್ಚು ವೈದ್ಯರಿಗೆ ಕೋವಿಡ್ ತಗುಲಿದ್ದು, ಅದರಲ್ಲಿ 168 ವೈದ್ಯರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ನಿನ್ನೆಯ ದಿನ 62,097 ಜನರಿಗೆ ಹೊಸದಾಗಿ ಕೋವಿಡ್ ತಗುಲಿದ್ದು, ಈವರೆಗೆ ಕೋವಿಡ್ ತಗುಲಿದವರ ಒಟ್ಟು ಸಂಖ್ಯೆ 39,60,359 ಕ್ಕೆ ಏರಿದೆ. ನಿನ್ನೆ 519 ರೋಗಿಗಳು ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 61,343 ಕ್ಕೆ ತಲುಪಿದೆ.

ಲಾಕ್ಡೌನ್ ಸಾಧ್ಯತೆ ನಿಚ್ಛಳ

ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿರುವ ಸನ್ನಿವೇಶದಲ್ಲಿ ಸಂಪೂರ್ಣ ಲಾಕ್ಡೌನ್ ಹೇರುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪಿಯವರು , ಕಟ್ಟುನಿಟ್ಟಿನ ಲಾಕ್ಡೌನ್ ಹೇರುವುದಲ್ಲದೇ ಬೇರೆ ದಾರಿಯಿಲ್ಲ ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು