ಹುಬ್ಬಳ್ಳಿ (19-12-2020): ಗೋಹತ್ಯೆ ಮಸೂದೆ ಕರ್ನಾಟಕ ವಿಧಾನ ಸಭೆಯಲ್ಲಿ ಬಿಜೆಪಿ ಸರಕಾರ ಅಂಗೀಕಾರ ಮಾಡಿರುವ ಮಧ್ಯೆ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹೀಂ ಹೇಳಿಕೆಯೊಂದನ್ನು ನೀಡಿದ್ದು, ಮುಸ್ಲಿಮರು ದಯವಿಟ್ಟು ಗೋ ಮಾಂಸ ತಿನ್ನಬೇಡಿ, ಗೋ ಹತ್ಯೆ ನಿಷೇಧಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.
ಮಾದ್ಯಮದ ಜೊತೆ ಮಾತನಾಡಿದ ಸಿಎಂ ಇಬ್ರಾಹೀಂ, ಸರಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇದರ ಜೊತೆಗೆ ಬಂಜೆಯಾದ ಹಸುಗಳನ್ನು ನೋಡಲು ಸರಕಾರ ಕ್ರಮವನ್ನು ಕೈಗೊಳ್ಳಬೇಕು.ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ ಗೋವುಗಳ ರಕ್ಷಣೆ ಮತ್ತು ಪಾಲನೆಯನ್ನು ಸರಕಾರದ ಹಣದಿಂದ ಮಾಡಬೇಕು ಎಂದು ಹೇಳಿದ್ದಾರೆ.
ಸಿಎಂ ಇಬ್ರಾಹೀಂ ಹೇಳಿಕೆಯಿಂದ ನಿಜಕ್ಕೂ ಕಾಂಗ್ರೆಸ್ಸಿಗರಲ್ಲಿ ಗೊಂದಲವನ್ನುಂಟು ಮಾಡಿದೆ. ಗೋ ಹತ್ಯೆ ನೀಷೇಧದ ಬಗ್ಗೆ ಕಾಂಗ್ರೆಸ್ಸಿಗರ ನಿಲುವು ಏನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ವಿಧಾನ ಸಭೆಯಲ್ಲಿ ಮಸೂದೆ ಮಂಡನೆ ವೇಳೆ ಕಾಂಗ್ರೆಸ್ ಸದನದಲ್ಲಿ ಬಿಲ್ ನ್ನು ವಿರೋಧಿಸಿತ್ತು. ಇದೀಗ ಕಾಂಗ್ರೆಸ್ ನಾಯಕನ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.