ಚರ್ಚ್ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು!

K P Yohanan’s Believers’
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(07-11-2020): ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೇರಳ ಮತ್ತು ಇತರ ಸ್ಥಳಗಳಲ್ಲಿನ ಕೆ ಪಿ ಯೋಹಾನನ್ ಬಿಲೀವರ್ಸ್ ಚರ್ಚ್‌ಗೆ ಸಂಬಂಧಿಸಿದ ಕಚೇರಿಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ ಐದು ಕೋಟಿ ರೂ. ಕರೆನ್ಸಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚರ್ಚ್ ಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ಮುಂದುವರಿದಿದೆ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಮತ್ತು (ಎಫ್‌ಸಿಆರ್‌ಎ) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಯ ಗಂಭೀರ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಿಲೀವರ್ಸ್ ಚರ್ಚ್ ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಇತರ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಇದು ಪಥನಮತ್ತಟ್ಟ ಜಿಲ್ಲೆಯ ಚೆರುವಾಲಿ ಎಸ್ಟೇಟ್ ನ್ನು ಸಹ ಹೊಂದಿದೆ.

2017 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಚರ್ಚ್‌ಗೆ ಸಂಬಂಧಿಸಿದ ಮೂರು ಎನ್‌ಜಿಒಗಳನ್ನು ಹಣವನ್ನು ಸ್ವೀಕರಿಸದಂತೆ ನಿರ್ಬಂಧಿಸಿತ್ತು ಆದರೆ ಇತ್ತೀಚಿನ ದಾಳಿಗಳು ವಿದೇಶಗಳಿಂದ ಇತರ ಹೆಸರುಗಳಲ್ಲಿ ಹಣದ ಹರಿವು ಸಂಸ್ಥೆಗೆ ಮುಂದುವರಿದಿದೆ ಎಂದು ತೋರಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ 100 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಬಂದಿದೆ ಎಂದು ಆರೋಪಿಸಲಾಗಿದೆ. ದಾಳಿ ಮುಗಿದ ನಂತರ ಇಲಾಖೆ ವಿವರಗಳನ್ನು ಬಿಡುಗಡೆ ಮಾಡುತ್ತದೆ ಎಂದು ಐ-ಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೆರಿಗೆ ವಂಚನೆ ಮತ್ತು ವಿದೇಶಿ ನಿಧಿಗಳ ದುರುಪಯೋಗದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು