HTFC ವಾರ್ಷಿಕೋತ್ಸವ,* *3ನೇ‌ಬಾರಿ ಅಧ್ಯಕ್ಷರಾಗಿ ಸಮೀರ್ K S , ಕಾರ್ಯದರ್ಶಿಯಾಗಿ ಸಮೀರ್ M G ಆಯ್ಕೆ*

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ : ಇಲ್ಲಿಗೆ ಸಮೀಪದ ಟಿಪ್ಪು ನಗರದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಮಿಂಚಿನ ಜನಸೇವೆಯ ಮೂಲಕ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಊರಪರವೂರ ಪ್ರಶಂಸೆಗೆ ಪಾತ್ರವಾಗಿರುವ ಹೆಮ್ಮೆಯ ಸಂಘಟನೆಯಾಗಿದೆ.

*ಹಝ್ರತ್ ಟಿಪ್ಪು ಸುಲ್ತಾನ್ ಪ್ರೆಂಡ್ಸ್ ಕಮಿಟಿ* (ರಿ)
HTFC – ಟಿಪ್ಪು ನಗರ – ವಿಟ್ಲ,
ಊರಿನ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯದಲ್ಲಿ ನೆರವಾಗುವುದು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ನೆರವಾಗುವುದು ಈ ಸಮಿತಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.
ಒಟ್ಟಿನಲ್ಲಿ ಈ ಸಂಘಟನೆಯು ಸಹೋದರತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.

ಇತ್ತೀಚಿಗೆ ಸಮಿತಿಯ ವಾರ್ಷಿಕ ಮಹಾಸಭೆಯು ನಡೆಯಿತು.ಸಭೆಯ ಗೌರವಾಧ್ಯಕ್ಷರಾಗಿ ಉಮ್ಮರ್ ಮುಸ್ಲಿಯಾರ್ ,ಅಧ್ಯಕ್ಷರಾಗಿ ಸಮೀರ್ ಕೆ.ಎಸ್,ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಎಮ್ ಜಿ , ಕೋಶಾಧಿಕಾರಿಯಾಗಿ ಅಬೂಬಕ್ಕರ್ ಕೆ ಎನ್,ಸಂಚಾಲಕರಾಗಿ ಸಲೀಮ್ ಕೆ ಎಸ್ ಎ ಮತ್ತು ಉಪಾಧ್ಯಕ್ಷರುಗಳಾಗಿ ಮುನೀರ್ ದಮ್ಮಾಮ್ ರಹೀಮ್ ಟಿಪ್ಪು ನಗರ,ಜೊತೆ ಕಾರ್ಯದರ್ಶಿಗಳಾಗಿ ಆಶಿಕ್ ಕೊಡಂಗಾಯಿ ಮತ್ತು ತಾಜು ಟಿಪ್ಪು ನಗರ ಇವರನ್ನು ನೇಮಕ ಮಾಡಲಾಯಿತು. ಮತ್ತು ಜ್ಯೂನಿಯರ್ ತಂಡದ ನಾಯಕರಾಗಿ ಹಾರೀಸ್ ಪಿ, ಖಲಂದರ್ ಶಾಫಿ ಇವರನ್ನು ನೇಮಿಸಲಾಯಿತು, ನಂತರ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆ ಪಡಿಸಲಾಯಿತು.ಸಭೆಯ ಚುನಾವಣೆ ಅಧಿಕಾರಿಗಳಾಗಿ ಹಮೀದ್ ಎಮ್ ಎಸ್,ರಝಾಕ್ ಎಮ್ ಕೆ,ರಿಯಾಝ್ ಟಿಪ್ಪು ನಗರ ಭಾಗವಹಿಸಿದರು.

✒️ ರಿಯಾಝ್ ಟಿಪ್ಪುನಗರ ಶಾರ್ಜಾ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು