ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿದ್ದ ತಮಿಳು ಹಾಸ್ಯ ನಟ ವಿವೇಕ್ ನಿಧನ | ಮೊನ್ನೆಯಷ್ಟೇ ಕೋವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ್ದರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ: ನಿನ್ನೆಯಷ್ಟೇ ಹೃದಯಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ತಮಿಳು ಹಾಸ್ಯ ನಟ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಹೃದಯಾಘಾತಕ್ಕೊಳಗಾಗುವ ಮೊದಲ ದಿನ (ಎಪ್ರಿಲ್ 15) ವಿವೇಕ್ ಅವರು ಕೋವಿಡ್ ಲಸಿಕೆ ಸ್ವೀಕರಿಸಿದ್ದರು. ಬಳಿಕ ಇತರರೂ ಲಸಿಕೆ ಪಡೆಯುವಂತೆ ಪ್ರೇರೇಪಿಸಿ ಮಾತನಾಡಿದ್ದರು.

ಒಮುನ್ದಾರಿ ಸರಕಾರೀ ಆಸ್ಪತ್ರೆಯಲ್ಲಿ ಪಡೆದ ಕೋವ್ಯಾಕ್ಸಿನ್ ಲಸಿಕೆ ಪಡೆದ ಮರು ದಿನವೇ ಹೃದಯಾಘಾತಕ್ಕೊಳಗಾಗಿರುವುದು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಹಲವರು ಕೋವ್ಯಾಕ್ಸಿನ್ ಪರಿಣಾಮವೇ ಎಂಬ ಸಂಶಯ ವ್ಯಕ್ತಪಡಿಸಿದ್ದರು.

ಆದರೆ ಸಿಮ್ಸ್ ಆಸ್ಪತ್ರೆಯ ತಜ್ಞ ಡಾ. ರಾಜು ಶಿವಸ್ವಾಮಿ, ವಿವೇಕ್ ಅವರು ಲಸಿಕೆ ಪಡೆದಿರುವುದಕ್ಕೂ, ಹೃದಯಾಘಾತಕ್ಕೂ ಸಂಬಂಧವಿಲ್ಲವೆಂದು ಹೇಳಿದ್ದಾರೆ.

ಎಪ್ರಿಲ್ ಹದಿನಾರರಂದು ಹೃದಯಾಘಾತಕ್ಕೊಳಗಾದ ತಕ್ಷಣವೇ ವಿವೇಕರನ್ನು ವದಪಳನಿಯ ಎಸ್ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವತ್ತು ಮುಂಜಾನೆ 4:35 ಹೊತ್ತಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

1989 ರಲ್ಲಿ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದ ವಿವೇಕ್ ನಿರಂತರವಾಗಿ ನಟಿಸುತ್ತಾ ಬಂದಿದ್ದಾರೆ.  ಪದ್ಮಶ್ರೀ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು