ಹೊಸದೆಹಲಿ(08/11/2020): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲುತ್ತಿದ್ದಂತೆ ನೆಟ್ಟಿಗರು ಹಳೆಯದ್ದನ್ನಲ್ಲಾ ಕೆದಕಿ ಹೊರ ಹಾಕುತ್ತಿದ್ದಾರೆ.
ಅವುಗಳಲ್ಲಿ ನೆಟ್ಟಿಗರ ಪರಿಹಾಸ್ಯಕ್ಕೆ ಗುರಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತೀಯ ಮತದಾರರನ್ನು ಸೆಳೆದು ಟ್ರಂಪ್ ಅವರನ್ನು ಗೆಲ್ಲಿಸಲು ಅಮೆರಿಕದ ಹ್ಯೂಸ್ಟನ್ ನಲ್ಲಿ ಹೌಡಿ ಮೋದಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡಲಾಗುತ್ತಿದೆ. ಮೋದಿ ಹೋದರೂ ಟ್ರಂಪ್ ಸೋತರು ಎಂದು ಲೇವಡಿ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮೋದಿ ಅಬ್ ಕಿ ಬಾರ್ ಟ್ರಂಪ್ ಸರಕಾರ್ ಎಂಬ ಘೋಷಣೆ ಮಾಡಿದ್ದರು. ಟ್ರಂಪ್ ಗಾಗಿ ಮತಯಾಚನೆ ಮಾಡಿದ್ದರು. ಇದು ಈಗ ಟ್ರಂಪ್ ಸೋಲುತ್ತಿದ್ದಂತೆ ಪರಿಹಾಸ್ಯವಾಗಿ ಟ್ರೆಂಡಿಂಗ್ ಆಗುತ್ತಿದೆ. ಇದರ ಜೊತೆಗೆ ಭಾರತದಲ್ಲಿ ನಡೆದ ನಮಸ್ತೇ ಟ್ರಂಪ್ ಕಾರ್ಯಕ್ರಮವು ಟ್ರೋಲ್ ಆಗುತ್ತಿದೆ.