ಹೊಸ ವರ್ಷದ ಜನವರಿ ಒಂದರಂದು ಜಾರಿಗೆ ಬರಲಿದೆ | ಜನರ ದಿನಚರಿಗಳಲ್ಲಿ ಪರಿಣಾಮ ಬೀರುವ ಕೆಲವು ಮಹತ್ವದ ಬದಲಾವಣೆಗಳು ಯಾವುದು ಗೊತ್ತೇ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(25-12-2020):  ಬರಲಿರುವ ಹೊಸ ವರ್ಷ 2021 ರ ಜನವರಿ ಒಂದರಿಂದ ಜನರ ದಿನಚರಿಗಳಲ್ಲಿ ಪರಿಣಾಮ ಬೀರುವ ಕೆಲವು ಮಹತ್ವದ ಬದಲಾವಣೆಗಳು ಇವು..

ಎಲ್ ಪಿ ಜಿ ಸಿಲಿಂಡರುಗಳ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳು
ಪರಿಷ್ಕರಿಸ ತೊಡಗುತ್ತವೆ. ಇದು ಅಂತರಾಷ್ಟ್ರೀಯ ಕಚ್ಛಾ ತೈಲದ ಬೆಲೆಯ ಮೇಲೆ ಅವಲಂಬಿತವಾಗಿರುತ್ತವೆ.

ಗೂಗಲ್ ಪೇಯು ತ್ವರಿತ ಹಣ ವರ್ಗಾವಣೆ ಮಾಡಿದರೆ, ಬಳಕೆದಾರರಿಗೆ ಚಾರ್ಜು ಹಾಕಲಿದೆ. ಗೂಗಲಿನ ಪೇ ವೆಬ್ ಆದ pay.google.com ಕಾರ್ಯನಿರ್ವಹಿಸುವುದಿಲ್ಲ. ಅದರ ಬದಲು ನವೀನ ‘ಗೂಗಲ್ ಪೇ’ ಆ್ಯಪ್ ಮೂಲಕ ಮಾತ್ರವೇ ಪಾವತಿ ಮಾಡಲು ಸಾಧ್ಯವಾಗುವುದು.

ಭಾರತೀಯ ರಿಸರ್ವ್ ಬ್ಯಾಂಕ್ ಸಕಾರಾತ್ಮಕ ಪಾವತಿ ಪದ್ಧತಿ ಜಾರಿಗೆ ತರುವುದು. ಇದರ ಪ್ರಕಾರ ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸುವ ಮೊದಲು ಚೆಕ್ಕಿನ ಪೂರ್ಣ ವಿವರಗಳನ್ನು ಕೊಡಬೇಕಾಗುವುದು. ಇದು ಐವತ್ತು ಸಾವಿರ ಮತ್ತು ಮೇಲ್ಪಟ್ಟ ಚಕ್ಕುಗಳಿಗೆ ಅನ್ವಯವಾಗಲಿದ್ದು, ಬ್ಯಾಂಕ್ ವಂಚನೆಯನ್ನು ತಡೆಯುವ ಉದ್ದೇಶವನ್ನಿಟ್ಟುಕೊಂಡಿದೆ.

ಕಾರ್ಡ್ ಮತ್ತು ಯುಪಿಐ ಮೂಲಕ ಕಾಂಟಾಕ್ಟ್ ಲೆಸ್ ವ್ಯವಹಾರ ಮಾಡುವ ಮಿತಿಯನ್ನು ರಿಸರ್ವ್ ಬ್ಯಾಂಕು ಎರಡು ಸಾವಿರ ರೂಪಾಯಿಗಳಿಂದ ಐದು ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಿದ್ದು, ಜನವರಿ ಒಂದರಿಂದ ಜಾರಿಗೆ ಬರಲಿದೆ.

ಐಫೋನ್ 4, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 2 ಮೊದಲಾದ ಕೆಲವು ಹಳೆಯ ಮಾದರಿಯ ಅಂಡ್ರಾಯ್ಡ್ ಫೋನುಗಳಲ್ಲಿ ವಾಟ್ಸಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.

ಸಣ್ಣ ತೆರಿಗೆದಾರರು ಒಂದು ವರ್ಷದಲ್ಲಿ ನಾಲ್ಕು ಜಿಎಸ್ ಟಿಆರ್ – 3ಬಿ ಮತ್ತು ನಾಲ್ಕು ಜಿಎಸ್ ಟಿ ಆರ್ 1 ರಿಟರ್ನ್ಸ್ ಮಾತ್ರವೇ ಸಲ್ಲಿಸಬೇಕಿದೆ. ಐದು ಕೋಟಿ ರೂಪಾಯಿವರೆಗೆ ವ್ಯವಹಾರ ಮಾಡುವವರು ನಾಲ್ಕು ಜಿಎಸ್ ಟಿ ಮಾರಾಟ ರಿಟರ್ನ್ಸ್ ಅಥವಾ ಜಿಎಸ್ ಟಿ ಆರ್ 3 ಬಿ ರಿಟರ್ನ್ಸ ಮಾತ್ರ ಸಲ್ಲಿಸಬೇಕಾಗುವುದು.

ದೇಶಾದ್ಯಂತ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ಹೊಸ ವರ್ಷದಿಂದಲೇ ಅದು ಜಾರಿಯಾಗಲಿದೆ. ಫಾಸ್ಟ್ಯಾಗ್ ನಿಂದಾಗಿ ಟೋಲ್ ಪ್ಲಾಜಾಗಳ ಸರತಿಯಲ್ಲಿ ವಾಹನಗಳು ಹೆಚ್ವು ನಿಲ್ಲಬೇಕಾಗಿ ಬರುವುದಿಲ್ಲ ಫಾಸ್ಟ್ಯಾಗುಗಳ ಅಳವಡಿಕೆಯಿಂದ ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ವಿದ್ಯುನ್ಮಾನವಾಗಿ ಪಾವತಿಸಲು ಅನುಕೂಲವಾಗುವುದು. ಸಮಯದ ಜೊತೆಗೆ ಇಂಧನವನ್ನೂ ಉಳಿಸಲು ಸಹಕಾರಿಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಮಾರುತಿ ಸುಝುಜಿ ಮತ್ತು ಮಹೀಂದ್ರಾ ಕಾರುಗಳ ಬೆಲೆಗಳಲ್ಲಿ ಏರಿಕೆ ಕಾಣಲಿದೆ.

ಲ್ಯಾಂಡ್ ಲೈನುಗಳಿಂದ ಮೊಬೈಲ್ ನಂಬರಿಗೆ ಕರೆ ಮಾಡುವಾಗ ಮೊದಲು “0” ಸೇರಿಸಿ ಡಯಲ್ ಮಾಡಬೇಕಾಗುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು