ನವದೆಹಲಿ(24-12-2020): ಜನವರಿ ಒಂದರಿಂದಲೇ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಫಾಸ್ಟ್ಯಾಗ್ ನಿಂದಾಗಿ ಟೋಲ್ ಪ್ಲಾಜಾಗಳ ಸರತಿಯಲ್ಲಿ ವಾಹನಗಳು ಹೆಚ್ವು ನಿಲ್ಲಬೇಕಾಗಿ ಬರುವುದಿಲ್ಲ. ಹೊಸ ವರ್ಷದಿಂದಲೇ ಅದು ದೇಶಾದ್ಯಂತ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಯನ್ನು ಉಲ್ಲೇಖಿಸುತ್ತಾ ಸಚಿವಾಲಯವು ಪ್ರಕಟಣೆ ಹೊರಡಿಸಿದೆ.
ಫಾಸ್ಟ್ಯಾಗುಗಳ ಅಳವಡಿಕೆಯಿಂದ ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ವಿದ್ಯುನ್ಮಾನವಾಗಿ ಪಾವತಿಸಲು ಅನುಕೂಲವಾಗುವುದು. ಸಮಯದ ಜೊತೆಗೆ ಇಂಧನವನ್ನೂ ಉಳಿಸಲು ಸಹಕಾರಿಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನು 2016 ರಲ್ಲಿ ಪರಿಚಯಿಸಲಾಗಿದ್ದು, 2017 ಆಗುವಾಗ ಏಳು ಲಕ್ಷ ಮತ್ತು 2018 ರ ಹೊತ್ತಿಗೆ 34 ಲಕ್ಷಕ್ಕೂ ಮಿಕ್ಕ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲಾಗಿದೆ.