ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರ ನಿರ್ಧಾರ | ಈ ತಿಂಗಳ ಇಪ್ಪತ್ತಾರರಂದು ದೇಶಾದ್ಯಂತ ಕರಾಳ ದಿನ ಆಚರಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವು ಮತ್ತೊಮ್ಮೆ ತೀವ್ರಗೊಳ್ಳುವ ಸೂಚನೆಗಳು ಕಂಡು ಬರುತ್ತಿದೆ.

ಆರು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟವು ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ತುಸು ಅಬ್ಬರ ಕಡಿಮೆಯಾಗಿತ್ತಾದರೂ ಮುಂದುವರಿಯುತ್ತಲೇ ಇತ್ತು. ಇದೀಗ ಹೋರಾಟವನ್ನು ಮತ್ತೊಮ್ಮೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ.

ವರೆಗೆ ಹನ್ನೊಂದು ಬಾರಿ ಸರಕಾರ ಮತ್ತು ರೈತ ಮುಖಂಡರ ನಡುವೆ ಮಾತುಕತೆಗಳು ನಡೆದಿತ್ತು. ಆದರೆ ಎಲ್ಲವೂ ವಿಫಲವಾಗಿವೆ. ಸರಕಾರವೂ ತನ್ನ ಪಟ್ಟು ಬಿಡುತ್ತಿಲ್ಲ. ರೈತರೂ ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ.

ವ್ಯವಸಾಯ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಸರಕಾರದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋರಾಟವನ್ನು ನಿಲ್ಲಿಸುವುದಿಲ್ಲವೆಂಬ ರೈತ ಮುಖಂಡರ ನಿಲುವು ಬದಲಿಸುವವರೆಗೂ ಸರಕಾರವು ಮಾತುಕತೆಗೆ ಸಿದ್ಧವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಹಿನ್ನೆಲೆಯಲ್ಲಿ ಹೋರಾಟವನ್ನು ಇನ್ನಷ್ಟು ಬಲಪಡಿಸಿಲು ರೈತರು ನಿರ್ಧರಿಸಿದ್ದಾರೆ.

ರೈತ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ತಿಂಗಳ ಇಪ್ಪತ್ತಾರರಂದು ರೈತ ಸಂಘಟನೆಗಳು ದೇಶಾದ್ಯಂತ ಕರಾಳ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.  ಇದಕ್ಕೆ ದೇಶ ವಿದೇಶಗಳಿಂದ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಿದೆ.

ಕಳೆದ ಆರು ತಿಂಗಳಿನಿಂದ ದೆಹಲಿಯ ಸಿಂಘು, ಥಿಕ್ರಿ, ಗಾಝಿಪುರ್ ಗಡಿಗಳಲ್ಲಿ ಸಾವಿರಾರು ರೈತರು ಜಮಾಯಿಸಿ, ಅಲ್ಲೇ ತಮ್ಮ ವಾಸಸ್ಥಳವನ್ನಾಗಿ ಪರಿವರ್ತಿಸಿದ್ದಾರೆ. ವರೆಗೆ 470 ರೈತರು ಇಲ್ಲಿ ವಿಪರೀತ ಚಳಿ ಮುಂತಾದ ಕಾರಣಗಳಿಂದಾಗಿ ಸಾವಿಗೀಡಾಗಿದ್ದಾರೆಂದು ರೈತ ಸಂಘಟನೆಯ ಒಕ್ಕೂಟ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು