ಏರ್ ಇಂಡಿಯಾ ವಿಮಾನ ಹಾಂಗ್ ಕಾಂಗ್ ಗೆ ಹೋಗುವಂತಿಲ್ಲ!

air india
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೊಸದೆಹಲಿ(28/10/2020): ಏರ್ ಇಂಡಿಯಾ ವಿಮಾನಗಳಿಗೆ ಹಾಂಗ್ ಕಾಂಗ್ ನಿರ್ಬಂಧ ವಿಧಿಸಿದೆ.

ಮುಂಬೈಯಿಂದ ತೆರಳಿದ್ದ ಕೆಲವು ಪ್ರಯಾಣಿಕರಲ್ಲಿ ಕೋವಿಡ್‌–19 ದೃಢಪಟ್ಟ ಕಾರಣ ನವೆಂಬರ್‌ 10ರವರೆಗೆ ಏರ್‌ ಇಂಡಿಯಾ ವಿಮಾನಗಳಿಗೆ ಹಾಂಗ್‌ಕಾಂಗ್‌ ನಿರ್ಬಂಧ ಹೇರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್‌ ಪ್ರಾರಂಭವಾದ ದಿನದಿಂದ ಈವರೆಗೆ ಏರ್‌ ಇಂಡಿಯಾ ವಿಮಾನಗಳಿಗೆ  ಹಾಂಗ್ ಕಾಂಗ್ ನಲ್ಲಿ ನಾಲ್ಕು ಬಾರಿ ನಿರ್ಬಂಧ ವಿಧಿಸಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 2ರಿಂದ ಅಕ್ಟೋಬರ್‌ 3, ಆಗಸ್ಟ್‌ 18ರಿಂದ 31 ಮತ್ತು ಅಕ್ಟೋಬರ್‌ 17ರಿಂದ
30ರವರೆಗೆ ಏರ್‌ ಇಂಡಿಯಾ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು