ಹಿರಿಯೂರು ನಗರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣೆ | ಕಾಂಗ್ರೆಸ್ಸಿಗೆ ಭರ್ಜರಿ ಗೆಲುವು; ಬಿಜೆಪಿಗೆ ಮರ್ಮಾಘಾತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿತ್ರದುರ್ಗ: ಹಿರಿಯೂರು ನಗರಸಭೆಯ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಭರ್ಜರಿ ಗೆಲುವು ಪಡೆದ ಕಾಂಗ್ರೆಸ್ ಬಿಜೆಪಿಗೆ ಮರ್ಮಾಘಾತ ನೀಡಿದೆ.

6, 7, 15 ಮತ್ತು 16ನೇ ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

6ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಬೀವುಲ್ಲಾ ಅವು 905 ಮತ ಪಡೆದು ಜಯ ಸಾಧಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿರುವ ಎಂ.ಮುಬಾರಕ್ 317 ಮತ ಸಿಕ್ಕಿದೆ. ಅದೇ ವೇಳೆ ಬಿಜೆಪಿಗೆ ಬರೇ 13 ಮತಗಳು ಸಿಕ್ಕಿವೆ.

7ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ, ಕಾಂಗ್ರೆಸ್ಸಿನ ವಿಠ್ಠಲ್ 866 ಮತ ಪಡೆದು, ಕೇವಲ 12 ಮತಗಳನ್ನು ಪಡೆದ ಬಿಜೆಪಿಯ ವಿಶ್ವನಾಥ್ ಅವರನ್ನು ದೊಡ್ಡ ಅಂತರದಿಂದ ಸೋಲಿಸಿದ್ದಾರೆ.

15 ನೇ ವಾರ್ಡಿನಲ್ಲಿ ಕಾಂಗ್ರೆಸ್ಸಿನ ಜಗದೀಶ್ 548 ಮತ ಪಡೆದರೆ, ಬಿಜೆಪಿಯ ಅಭ್ಯರ್ಥಿ ಶೈಲಜಾ 237 ಮತಗಳಿಗಷ್ಟೇ ತೃಪ್ತಿಪಡಬೇಕಾಯಿತು

16ನೇ ವಾರ್ಡಿನಲ್ಲಿ ಕಾಂಗ್ರೆಸ್ಸಿನ ಗೀತಾ 675 ಮತ ಪಡೆಯುವಾಗ, ಬಿಜೆಪಿಯ ಮಮತಾ 183 ಮತಗಳನ್ನು ಪಡೆದು ಸೋತಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷ್ಮಿ ಎಂಬವರಿಗೆ ಒಂದೇ ಒಂದು ಮತ ದೊರಕಿಲ್ಲ.

ಇದು ಮುಂಬರುವ ಹಿರಿಯೂರು ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆಯೆಂದು ನಂಬಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು