ಹಿಂದೂಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ ಪಾಕ್ ಪ್ರಧಾನಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಸ್ಲಾಮಾಬಾದ್ ‌: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹಿಂದೂಗಳಿಗೆ ಹೋಳಿಯ ಬಣ್ಣದ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಹೋಳಿ ಹಬ್ಬವನ್ನು ಪಾಕಿಸ್ತಾನದಲ್ಲಿ ಭಾನುವಾರ ಮತ್ತು ಸೋಮವಾರ ಆಚರಿಸಲಾಗುತ್ತಿದೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ “ನಮ್ಮೆಲ್ಲಾ ಹಿಂದೂ ಸಮುದಾಯದ ಬಾಂಧವರಿಗೆ ಹೋಳಿ ಹಾಗೂ ಬಣ್ಣದ ಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಸಂಸತ್ತಿನ ಸ್ಪೀಕರ್ ಅಸಾದ್ ಖೈಸರ್ ಸೇರಿದಂತೆ ಹಲವು ನಾಯಕರು ಎಲ್ಲಾ ಸಂಸದರಿಗೆ ಹಾಗೂ ಹಿಂದೂಗಳಿಗೆ ಹೋಳಿ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಧಾರ್ಮಿಕ ಹಬ್ಬಗಳನ್ನು ಬಹಿರಂಗವಾಗಿ ಆಚರಿಸಬಹುದು ಎಂದು ಅವರು ಸ್ಪೀಕರ್ ಖೈಸರ್ ಟ್ವೀಟ್ ಮಾಡಿದ್ದಾರೆ.

ಅಂಕಿ -ಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ನೆಲೆಸಿದ್ದಾರೆ. ಪಾಕ್ ನಲ್ಲಿ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಹಿಂದೂ ಸಮುದಾಯ ಇದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು