ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಹಿಂದೂ ಯುವ ವಾಹಿನಿ ಸಂಘಟನೆಯೊಂದು ಸಮಾಜದಲ್ಲಿ ಅಶಾಂತಿ ಕೆಡಿಸುವ ಪ್ರಯತ್ನಕ್ಕೊಂದು ಕೈಹಾಕಿದೆ.
ಹಿಂದೂ ಧರ್ಮದವರಲ್ಲದೆ ಇತರ ಧರ್ಮದವರು ಯಾರೂ ಕೂಡ ಈ ದೇವಸ್ಥಾನಗಳಿಗೆ ಪ್ರವೇಶಿಸಬಾರದು ಎಂದು 140 ಕ್ಕೂ ಹೆಚ್ಚು ದೇವಸ್ಥಾನಗಳ ಮುಂದುಗಡೆ ಫಲಕಗಳನ್ನು ಹಾಕಿದ್ದಾರೆ.
“ಈ ಬ್ಯಾನರ್ ಗಳನ್ನು ನಾವೇ ಹಾಕಿದ್ದು,ಯಾವುದೇ ಕಾರಣಕ್ಕೂ ಅನ್ಯಕೋಮಿನವರು ಈ ದೇವಸ್ಥಾನಗಳಿಗೆ ಪ್ರವೇಶಿಸಬಾರದು.ಒಂದು ವೇಳೆ ಪ್ರವೇಶಿಸಿದರೆ ಅವರನ್ನು ಥಳಿಸಿ ಪೋಲಿಸರಿಗೆ ಒಪ್ಪಿಸುತ್ತೇವೆ” ಎಂದು ಹಿಂದೂ ಯುವ ವಾಹಿನಿ ಅಧ್ಯಕ್ಷ ಗೋವಿಂದ್ ವಾದ್ವಾ ಎಚ್ಚರಿಕೆ ನೀಡಿದ್ದಾನೆ.