ಹಿಮಾಲಯ ಪರ್ವತದಲ್ಲಿ ಪ್ರಬಲ ಭೂಕಂಪನ ಸಾಧ್ಯತೆ| ಸಂಶೋಧನಾ ವರದಿ

himalaya
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(23-10-2020): ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಭವಿಸಬಹುದಾದ ಬಹುದೊಡ್ಡ ಅನಾಹುತದ ಬಗ್ಗೆ ಸಂಶೋಧಕರು ಸುಳಿವನ್ನು ನೀಡಿದ್ದಾರೆ.

‘ಸೆಸ್ಮೊಲೊಜಿಕಲ್‌ ರಿಸರ್ಚ್‌ ಲೆಟರ್ಸ್‌’ ನಿಯತಕಾಲಿದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು,ನಮ್ಮ ಜೀವಿತಾವಧಿಯಲ್ಲೇ ಹಿಮಾಲಯ ಪರ್ವತ ಶ್ರೇಣಿಯಲ್ಲಿ 8 ಮ್ಯಾಗ್ನಿಟ್ಯೂಡ್‌ ತೀವ್ರತೆಗಿಂತ ಅಧಿಕವಾದ ಭಾರೀ ಸರಣಿ ಭೂಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಒಂದು ವೇಳೆ ಸಂಶೋಧಕರು ನೀಡಿರುವ ಮಾಹಿತಿಯಂತೆ ಭೂಕಂಪನವಾದರೆ ಹಿಮಾಲಯ ಪರ್ವತದ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳಲ್ಲಿ ಅಪಾರ ಸಾವು-ನೋವು ಸಂಭವಿಸಲಿದೆ.

20ನೇ ಶತಮಾನದ ಗಲ್ಫ್‌ ಆಫ್‌ ಅಲಾಸ್ಕದಿಂದ ಪೂರ್ವ ರಷ್ಯಾದ ಆಯಮ್‌ಚಟ್ಕಾದವರೆಗಿರುವ ಲ್ಯೂಷನ್‌ ಸಬ್‌ಡಕ್ಷನ್‌ ವಲಯದಲ್ಲಿ ಸಂಭವಿಸಿದ ಭೂಕಂಪದ ಶೈಲಿಯಲ್ಲಿ ಹಿಮಾಲಯ ಶ್ರೇಣಿಯಲ್ಲೂ ಸರಣಿ ಭೂಕಂಪನ ಸಂಭವಿಸಲಿದೆ ಎಂದು ಅಧ್ಯಯನ ಹೇಳಿದೆ.

ಹಿಮಾಲಯದಲ್ಲಿ ಆಗಾಗ್ಗೆ ಸಣ್ಣ ಭೂಕಂಪನಗಳು ವರದಿಯಾಗುತ್ತಿದೆ. ಆದರೆ ಭಾರತದ ಅರುಣಾಚಲ ಪ್ರದೇಶದ ಪೂರ್ವ ಗಡಿಭಾಗದಿಂದ ಪಾಕಿಸ್ತಾನದವರೆಗೆ ವ್ಯಾಪಿಸಿರುವ ಹಿಮಾಲಯದಲ್ಲಿ ನಮ್ಮ ಜೀವಿತಾವಧಿಯಲ್ಲೇ ಪ್ರಬಲ ಭೂಕಂಪನ ಸಂಭವಿಸಲಿದೆ ಎಂದು ಹೇಳಿದ್ದಾರೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು