ಮಿಂಚಿನ ಓಟಗಾರ್ತಿ ಹಿಮಾದಾಸ್ ಡಿಎಸ್ಪಿಯಾಗಿ ನೇಮಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದಿಸ್ಪುರ(11-02-2021): ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಅವರನ್ನು ಡಿಎಸ್ಪಿಯಾಗಿ ಅಸ್ಸಾಂ ಸರ್ಕಾರ ನೇಮಿಸಿದೆ.

ಹಿಮಾ ದಾಸ್​ರನ್ನು ಡಿಎಸ್​ಪಿಯಾಗಿ ನೇಮಿಸಿರುವ ಬಗ್ಗೆ  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಟ್ವೀಟ್ ನಲ್ಲಿ ಅಸ್ಸಾಂನ ಸರ್ಬಾನಂದ ಸೋನೊವಾಲ್ ಸರ್ಕಾರವು ಹಿಮಾ ದಾಸ್​ ಅವರನ್ನು ಡಿಎಸ್​ಪಿಯಾಗಿ ನೇಮಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಸಧ್ಯ ಹಿಮಾ ದಾಸ್ ಎನ್‌ಐಎಸ್ ಪಟಿಯಾಲದಲ್ಲಿ ಒಲಿಂಪಿಕ್ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಭಾರತಕ್ಕಾಗಿ ಸ್ಪರ್ಧಿಸಲಿದ್ದಾರೆ ಎಂದು ಇದೇ ವೇಳೆ ಸಚಿವರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು