ಬೆಂಗಳೂರು(12-11-2020): ಆರ್.ಆರ್ ನಗರದಲ್ಲಿ ಭಾರೀ ಅಂತರದಿಂದ ಮುನಿರತ್ನ ಗೆದ್ದ ಬೆನ್ನಲ್ಲೇ ಅವರಿಗೆ ಶಾಕಿಂಗ್ ಎದುರಾಗಿದೆ.
ಅಕ್ರಮ ವೋಟರ್ ಐಡಿ ತಯಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ಪೀಠ ಅಕ್ರಮ ವೋಟರ್ ಐಡಿ ಪತ್ತೆ ಪ್ರಕರಣದ ಬಗ್ಗೆ ಉನ್ನತ ದರ್ಜೆಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಅರ್ಜಿದಾರರ ಸಮಸ್ಯೆ ಆಲಿಸಬೇಕು. ತನಿಖೆ ಸೂಕ್ತವಾಗಿ ನಡೆದಿದೆಯೋ ಇಲ್ಲವೋ ಪರಿಶೀಲಿಸಬೇಕು. ಈ ಕುರಿತು ಡಿ.15ರೊಳಗೆ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ಸೂಚಿಸಿದೆ.