ಸಲಿಂಗ ದಂಪತಿಗೆ ರಕ್ಷಣೆ ನೀಡುವಂತೆ ಹೈಕೋರ್ಟ್ ಸೂಚನೆ

same sexual couple
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಲಹಾಬಾದ್(04-11-2020): ಸಲಿಂಗ ದಂಪತಿಗೆ ರಕ್ಷಣೆ ನೀಡುವಂತೆ ಉತ್ತರಪ್ರದೇಶದ ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.

ಶಾಮ್ಲಿಯ ಸುಲ್ತಾನಾ ಮಿರ್ಜಾ ಮತ್ತು ಕಿರಣ್ ರಾಣಿ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಕೆ.ಗುಪ್ತಾ ಮತ್ತು ಪಂಕಜ್ ಭಾಟಿಯಾ ಅವರ ನ್ಯಾಯಪೀಠ, ಸಲಿಂಗ ದಂಪತಿಗರ ಭದ್ರತೆ ಒದಗಿಸುವಂತೆ ಆದೇಶ ನೀಡಿದೆ.

ಅರ್ಜಿದಾರರಿಗೆ ಯಾರೂ ಕಿರುಕುಳ ಕೊಡದಂತೆ ನೋಡಿಕೊಳ್ಳಲು ಕೋರ್ಟ್ ಸೂಚಿಸಿದೆ. ಅರ್ಜಿದಾರರು ನಾವು ಹಲವು ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದೇವೆ. ನಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್ ಗೆ ತಿಳಿಸಿದ್ದರು.

ವ್ಯಕ್ತಿಯ ಲೈಂಗಿಕ ವಿಚಾರಕ್ಕೆ ಆಧರಿಸಿ ಯಾವುದೇ ತಾರತಮ್ಯ ಕೂಡ ಅಸಂವಿಧಾನಿಕವೆಂದು ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಪರಿಗಣಿಸಲಾಗಿದ್ದನ್ನು ನ್ಯಾಯಪೀಠ ಉಲ್ಲೇಖಿಸಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು