ಎಫ್ ಐ ಆರ್ ದಾಖಲಿಸುವುದಕ್ಕಿಂತ ಅಪರಾಧವನ್ನು ತಡೆಯುವುದೇ ಪೊಲೀಸರ ಮೊದಲ ಆದ್ಯತೆಯಾಗಬೇಕು; ಹೈಕೋರ್ಟ್ ಪೀಠ

hc
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(27/10/2020); ಪೊಲೀಸರು ಅಪರಾಧದ ನಡೆಯುತ್ತಿರುವುದರ ಸುಳಿವು ಸಿಕ್ಕೊಡನೇ ಆ ಅಪರಾಧವನ್ನು ತಡೆಯಬೇಕೇ ವಿನಾ ಎಫ್ ಐಆರ್ ದಾಖಲಿಸುತ್ತಾ ಕುಳಿತುಕೊಳ್ಳುವುದಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಾ ಹೈಕೋರ್ಟ್ ಈ ತೀರ್ಪು ನೀಡಿದೆ.

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೇರಳದ ಕಣ್ಣೂರು ಮೂಲದ ತಸ್ಲೀಮ್, ಹಸೀಬ್, ರಾಝಿಕ್ ಅಲಿ ಎಂಬವರ ಜಾಮೀನು ವಿಚಾರಣೆಯನ್ನು ಕೋರ್ಟ್ ನಡೆಸುತ್ತಿತ್ತು.

ಪೊಲೀಸರು ಎಫ್ ಐಆರ್ ದಾಖಲಿಸದೆ ದಾಳಿ ಮಾಡಿದ್ದಾರೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ `ರಹಸ್ಯ ಮಾಹಿತಿ ಸಿಕ್ಕ ತಕ್ಷಣ ಅಪರಾಧವನ್ನು ತಡೆಯುವುದು ಪೊಲೀಸರ ಕರ್ತವ್ಯವೇ ವಿನಾ ಎಫ್ ಐ ಆರ್ ದಾಖಲಿಸುತ್ತಾ ಸಮಯ ವ್ಯರ್ಥ ಮಾಡುವುದಲ್ಲ. ಅಪರಾಧವನ್ನು ತಡೆಯುವುದೇ ಪೊಲೀಸರ ಪ್ರಥಮ ಆದ್ಯತೆಯಾಗಬೇಕು’ ಎಂದು ಕೋರ್ಟ್ ಹೇಳಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು