ಹೆಚ್ಚು ಪಡಿತರ ಧಾನ್ಯ ಪಡೆಯಲು ನೀವ್ಯಾಕೆ ಹೆಚ್ಚು ಮಕ್ಕಳನ್ನು ಹೇರಲಿಲ್ಲ: ಉತ್ತರಾಖಂಡ ಸಿಎಂ ರಾವತ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಮನಗರ: ಯುವತಿಯರು ಹರಿದ ಜೀನ್ಸ್ ತೊಡುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ಈಗ ಪಡಿತರ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಒಂದು ಮನೆಯಲ್ಲಿ 10 ಜನರಿದ್ದವರಿಗೆ 50 ಕೆಜಿ ಧಾನ್ಯ ಪಡೆದರೆ, 20 ಜನರಿದ್ದವರಿಗೆ ಕ್ವಿಂಟಾಲ್ ದೊರೆತಿದೆ. ಆದರೆ, ಮನೆಯಲ್ಲಿ ಇಬ್ಬರೇ ಇದ್ದವರು 10ಕೆಜಿ ಮಾತ್ರ ಪಡೆದು, 20 ಜನರಿದ್ದವರು ಕ್ವಿಂಟಾಲ್ ಧಾನ್ಯ ಪಡೆದಾಗ ಅವರಿಗೆ ಹೊಟ್ಟೆ ಕಿಚ್ಚು ಆಗುತ್ತದೆ.
ಸಮಯ ಇದ್ದರೂ ನೀವು ಇಬ್ಬರು ಮಕ್ಕಳನ್ನು ಜನ್ಮ ನೀಡಿದ್ದೀರಿ. ನೀವು 20 ಮಕ್ಕಳಿಗೆ ಏಕೆ ಹೆರಲಿಲ್ಲ ಎಂದು ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.

ನೈನಿತಾಲ್ ನ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಈ ರೀತಿ ಹೇಳಿಕೆ ನೀಡಿದ್ದಾರೆ. ಹೊಸ ಮುಖ್ಯಮಂತ್ರಿಯಾಗಿ ನೇಮಕವಾದ ತೀರಥ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು