ನಿಮ್ಮ ಹೃದಯವನ್ನು ನೀವು ಹೇಗೆ ರಕ್ಷಿಸಬಹುದು? ಇಲ್ಲಿದೆ ಸಲಹೆ

heart
Share on facebook
Share on twitter
Share on linkedin
Share on whatsapp
Share on telegram
Share on email
Share on print

ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಓರ್ವ ಮನುಷ್ಯನ ದೊಡ್ಡ ಸಂಪತ್ತು. ನಮ್ಮ ಅರೋಗ್ಯ ಉತ್ತಮವಾಗಿರಬೇಕಾದರೆ ನಾವು ಹೆಚ್ಚು ಕಾಳಜಿಯನ್ನು ವಹಿಸಬೇಕು. ಉತ್ತಮ ಆರೋಗ್ಯ ಇದ್ದರೆ ಮನುಷ್ಯ ನೆಮ್ಮದಿಯಿಂದ ಬದುಕಬಹುದಾಗಿದೆ. ಮನುಷ್ಯನಿಗೆ ಕಿಡ್ನಿ, ಪಿತ್ತಜನಾಕಾಂಗ, ಹೃದಯ, ಮೆದುಳು, ಕರುಳು ಈಗೆ ಒಂದಲ್ಲ ಒಂದು ದೇಹದ ಅಂಗ ಕೈಕೊಟ್ಟರೂ ಆತನ ಜೀವಕ್ಕೆ ಕುತ್ತು ತರುವುದು ಗ್ಯಾರೆಂಟಿ. ಆದ್ದರಿಂದ ನಾವು ನಮ್ಮ ದೇಹದ ಭಾಗಗಳನ್ನು ರಕ್ಷಣೆ ಮಾಡಬೇಕಿದೆ. ಇಂದಿನ ಸಂಚಿಕೆಯಲ್ಲಿ ನಿಮ್ಮ ಹೃದಯವನ್ನು ನೀವು ಹೇಗೆ ರಕ್ಷಣೆ ಮಾಡಬಹದು ಎಂದು ತಿಳಿದುಕೊಳ್ಳಿ.

 

ಹೃದಯ ಪ್ರತಿ ಕ್ಷಣವೂ ಅವಿರತವಾಗಿ ದುಡಿಯುತ್ತದೆ. ಒಂದು ಕ್ಷಣ ಹೃದಯ ತನ್ನ ಕೆಲಸವನ್ನು ನಿಲ್ಲಿಸಿದರೆ ಈ ವ್ಯಕ್ತಿ ಜೀವಂತವಾಗಿ ಮತ್ತೆ ಇರಲು ಸಾಧ್ಯವಿಲ್ಲ.ಜಾಗತಿಕ ಮಟ್ಟದಲ್ಲಿ ಹೃದಯ ಸಂಬಂಧಿ ರೋಗಗಳನ್ನು ತಡೆಯುವ ಮತ್ತು ಅವುಗಳ ವಿರುದ್ದ ಹೋರಾಡುವ ಉದ್ದೇಶದಿಂದ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಕ್ರಮ ಅನುಸರಿಸುವ ಹಾಗೂ ದುಶ್ಚಟಗಳಿಂದ ದೂರವಿರುವ ಮೂಲಕ ನಮ್ಮ ಹೃದಯಗಳನ್ನು ನಾವು ರಕ್ಷಣೆ ಮಾಡಬಹುದಾಗಿದೆ.

*ಹೃದಯದ ಆರೋಗ್ಯ ರಕ್ಷಣೆಗಾಗಿ ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.

*ವ್ಯಾಯಾಮ, ನಡೆದಾಡುವ ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು.

*ಹೆಚ್ಚು ಹೆಚ್ಚು ತಾಜಾ ತರಕಾರಿಗಳು ಮತ್ತು ಹಣ್ಣು, ಎಲ್ಲ ತರಹದ ದವಸಧಾನ್ಯ, ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ಸೇವನೆ ಮಾಡಬೇಕು.

*ಅನಾರೋಗ್ಯಕರ ಕೊಲೆಸ್ಟ್ರಾಲ್ ಅಂಶದ ಆಹಾರ ಸೇನೆ ಆದಷ್ಟು ದೂರಮಾಡಬೇಕು.

*ನಿಮ್ಮ ಆಹಾರದಲ್ಲಿ ಉಪ್ಪಿನ ಅಂಶ (ಸೋಡಿಯಂ)ವನ್ನು ಕಡಿಮೆಗೊಳಿಸಬೇಕು.

 *ಧೂಮಪಾನ ಮದ್ಯಪಾನದಿಂದ ದೂರವಿರಬೇಕು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು