ಕಣ್ಣು ನಮ್ಮ ದೇಹದ ಅವಿಭಾಜ್ಯ ಅಂಗ. ಕಣ್ಣಿಗೆ ಹಾನಿಯಾದರೆ ನಮಗೆ ವಾಸ್ತವ ಪ್ರಪಂಚವೇ ಕತ್ತಲಾಗುತ್ತದೆ. ಆದ್ದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬೇಕಿದೆ. ನಾವು ಕೆಲಸದ ಮಾಡುವಾಗ, ವಾಹನಗಳಲ್ಲಿ ಸಂಚರಿಸುವಾಗ ಕಣ್ಣಿಗೆ ಧೂಳು, ಕಸ ಹೋಗುತ್ತದೆ. ಹೆಚ್ಚು ಹೊತ್ತು ಕಂಪ್ಯೂಟರ್, ಮುಂದೆ ಕೆಲಸ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ. ಈ ವೇಳೆ ಕಣ್ಣನ್ನು ನಾವು ಉಜ್ಜಲು ಪ್ರಯತ್ನಿಸುತ್ತೇವೆ. ಇದನ್ನು ಮಾಡಬಾರದು ಯಾಕೆಂದರೆ ಅದು ನಮ್ಮ ಕಣ್ಣಿನ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಕಣ್ಣಿಗೆ ದೂಳು, ಕಸ, ಬಿದ್ದಲ್ಲಿ ಕೆಳಗಿನ ವಿಧಾನವನ್ನು ಅನುಸರಿಸಿ
ಸೌತೆಕಾಯಿ ಪೀಸ್ ನ್ನು ಕತ್ತರಿಸಿ 10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣಿನ ಕಿರಿಕಿರಿ, ಊತವನ್ನು ಕಡಿಮೆ ಮಾಡುತ್ತದೆ.
ಒಣಗಿದ ಕ್ಯಾಮೊಮೈಲ್ ಹೂಗಳ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಕುದಿಸಿ ಅದನ್ನು ಸೋಸಿ, ತಣ್ಣಗಾದ ಬಳಿಕ ಕಾಟನ್ ಪ್ಯಾಡ್ ನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ಕಣ್ಣುಗಳಲ್ಲಿನ ತುರಿಕೆ, ಶುಷ್ಕತೆ, ಕೆಂಪಾಗಿದ್ದು ಕಡಿಮೆಯಾಗುತ್ತದೆ.
ಇನ್ನು ನಿಮಗೆ ಸುಸ್ತಾದಲ್ಲಿ ಸ್ವಲ್ಪ ಮುಖಕ್ಕೆ ನೀರು ಹಾಕಿ ಮುಖವನ್ನು ತೊಳೆಯಿರಿ ಆಗ ಕಣ್ಣಿಗೂ ಆರಾಮ ಸಿಗುತ್ತದೆ.