ನಿಮ್ಮ ಬಾಯಿ & ಹಲ್ಲಿನ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್

TEETH
Share on facebook
Share on twitter
Share on linkedin
Share on whatsapp
Share on telegram
Share on email
Share on print

ಆರೋಗ್ಯ ಸುದ್ದಿ: ಇಂದು ಶೇ.85 ಜನರು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲ್ಲಿನ ಕ್ಷಯ ಅಥವಾ ಹಲ್ಲಿನ ಕೊಳೆತ, ಬಾಯಿ ಕ್ಯಾನ್ಸರ್ ಮತ್ತು ವಸಡಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಜನರು ಬಳಲುತ್ತಿರುವುದನ್ನು ನಾವು ನೋಡಿದ್ದೇವೆ. ಪ್ರತಿಯೊಬ್ಬರು ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ನಮ್ಮ ಹಲ್ಲಿನ ಮತ್ತು ಬಾಯಿಯ ರಕ್ಷಣೆ ಸಾಧ್ಯ. ನಮ್ಮ ಹಲ್ಲಿನ ಮತ್ತು ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳಲು ನಾವೇನು ಮಾಡಬೇಕು? ಇಲ್ಲಿದೆ ಮಾಹಿತಿ

ಪ್ರತಿದಿನ ಎರಡು ಬಾರಿ ಬ್ರಷ್ ಗಳ ಮೂಲಕ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಹಲ್ಲು ಸ್ವಚ್ಛಗೊಳಿಸುವಾಗ ಜಲ್ ಮಾದರಿಯ ಪೇಸ್ಟ್ ಬಳಕೆ ಮಾಡಬೇಡಿ

ಹಲ್ಲುಗಳಲ್ಲಿ ಆಹಾರದ ತುಂಡುಗಳು ಸಿಲುಕಿದರೆ ಚೂಪಾದ ವಸ್ತುಗಳ ಬಳಕೆ ಮಾಡಬೇಡಿ

ಊಟದ ನಡುವೆ ಅನಾವಶ್ಯಕವಾಗಿ ಲಘು ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಿ

ಬಾಯಿ ಹುಣ್ಣುಗಳು 2 ವಾರಕ್ಕಿಂತ ಹೆಚ್ಚು ಸಮಯ ಇದ್ದರೆ ಅದನ್ನು ಅಲಕ್ಷಿಸದೇ ವೈದ್ಯರಿಗೆ ತೋರಿಸಿ

ವರ್ಷಕ್ಕೆ ಕನಿಷ್ಠ 2 ಬಾರಿಯಾದರೂ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಿ.

ದಂತ ವೈದ್ಯರ ಸೂಚನೆಯಿಲ್ಲದೆ ಮೌತ್‌ವಾಶ್ ಗಳನ್ನು ಬಳಸಬೇಡಿ. ಇದು ಕೆಮಿಕಲ್ ಬರ್ನಿಂಗ್ ಗೆ ಕಾರಣವಾಗಬಹುದು.

ಹಲ್ಲುಜ್ಜುವ ಬ್ರಷ್‌ನಿಂದ ಪ್ರತಿದಿನ ಒಮ್ಮೆ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಿ.  ಸ್ಟೀಲ್ ಕ್ಲೀನರ್ಗಳನ್ನು ಬಳಸುವುದರಿಂದ ನಾಲಿಗೆಯನ್ನು ಹಾನಿಗೊಳಿಸಬಹುದು.

ಹಲ್ಲಿನ ನೋವು, ವಸಡುಗಳಲ್ಲಿ ರಕ್ತಸ್ರಾವ, ಊತ ಅಥವಾ ಹುಣ್ಣುಗಳಾದ ಸಂದರ್ಭದಲ್ಲಿ, ದಂತವೈದ್ಯರನ್ನು ಸಂಪರ್ಕಿಸಿ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು