ಬೆಂಗಳೂರು (3-11-2020): ಕೊರೋನಾ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಬಹಳಷ್ಟು ನೆರವು ನೀಡಿದ ಅಜೀಮ ಪ್ರೇಮ್ ಜಿ ಸಂಸ್ಥೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಅಜೀಂ ಪ್ರೇಮ್ ಜಿ ಸಂಸ್ಥೆಯ ವತಿಯಿಂದ ಬಿಬಿಎಂಪಿ ಪೂರ್ವ ವಲಯಕ್ಕೆ 800, ಮಹದೇವಪುರಕ್ಕೆ 500, ಬೊಮ್ಮನಹಳ್ಳಿಗೆ 800 ಮತ್ತು ದಾಸರಹಳ್ಳಿಗೆ 655 ಸೇರಿ ಒಟ್ಟು 4,755 ರಕ್ತದ ಆಮ್ಲಜನಕ ಪ್ರಮಾಣ ಅಳೆಯುವ ಉಪಕರಣವನ್ನು ಕೊಡುಗೆಯಾಗಿ ನೀಡಿದೆ. ಬೆಂಗಳೂರಿನ ಬ್ರಾಂಡ್ ವೇ ರಸ್ತೆಯ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟಿದೆ.
ಕೊರೋನಾ ರೋಗ ಪರೀಕ್ಷೆಗೆ ಬಳಸಲಾಗುವ ಐದು ಉಪಕರಣಗಳನ್ನು ಬೆಂಗಳೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ, ರಾಷ್ಟ್ರೀಯ ಮೊರಾಲಜಿ ಸಂಸ್ಥೆಗಳಿಗೆ ನೀಡಿ ಸಹಕರಿಸಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಆರ್ಟಿಪಿಸಿ ಮತ್ತು ಆರ್ಎನ್ಎ ಯಂತ್ರಗಳನ್ನು ಕೊಟ್ಟಿದೆ.
ಈ ಎಲ್ಲಾ ರೀತಿಯಲ್ಲಿ ಕೊರೋನಾ ವಿರುದ್ಧದ ಸಮರಕ್ಕೆ ಅಜೀಂ ಪ್ರೇಮ್ ಜಿ ಸಂಸ್ಥೆ ಕೊಟ್ಟಿರುವ ಸಹಕಾರಕ್ಕೆ ಸುಧಾಕರನ್ ಅಭಿನಂದನೆ ಸಲ್ಲಿಸಿದರು.