ಬಾಗಲಕೋಟೆ(08-11-2020): ತಾಯಿಯ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದಿಟ್ಟ ಮಕ್ಕಳು ವೃದ್ಧೆ ತಾಯಿಯನ್ನು ಬೀದಿಗೆ ಬಿಟ್ಟ ದಯಾನೀಯ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಶಾವಂತ್ರಮ್ಮ ಬೀದಿಗೆ ಬಿದ್ದ ಅನಾಥೆ ತಾಯಿ. ಇವರಿಗೆ 6 ಜನ ಮಕ್ಕಳು, ಇದರಲ್ಲಿ 4 ಜನ ಸರ್ಕಾರಿ ಕೆಲಸದಲ್ಲಿದ್ದಾರೆ. ಉಪನ್ಯಾಸಕ, ಶಿಕ್ಷಕ ಗೆ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ಮಕ್ಕಳನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದ ತಾಯಿಯನ್ನು ಮಾತ್ರ ಬೀದಿಗೆ ಬಿಟ್ಟಿದ್ದಾರೆ.
ಗಂಡ ಸತ್ತ ಬಳಿಕ ಶಾವಂತ್ರಮ್ಮ ಆಸ್ತಿಯನ್ನು ಮಕ್ಕಳು ಪಾಲು ಮಾಡಿಕೊಂಡಿದ್ದರು. ಆಕೆಯಲ್ಲಿದ್ದ ಅಲ್ಪ ಹಣವನ್ನು ಕೂಡ ದೋಚಿದ್ದರು. ಬಳಿಕ ಬಟ್ಟೆ, ಹಾಸಿಗೆಯನ್ನು ಎಸೆದು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದಾಗಿ ದಿಕ್ಕಿಲ್ಲದೆ ಶಾವಂತ್ರಮ್ಮ 8 ತಿಂಗಳುಗಳ ಕಾಲ ಬೀದಿ-ಬೀದಿಯಲ್ಲಿ ಅಲೆದಾಡಿ ಕೊನೆಗೆ ಸಿಂಧನೂರು ಕಾರುಣ್ಯ ವೃದ್ಧಾಶ್ರಮವನ್ನು ತಲುಪಿದ್ದಾರೆ.