‘ಹಯಾತ್-ವ್ಯಾಕ್ಸ್’ ಹೆಸರಿನಲ್ಲಿ ಸಿನೋಫಾರ್ಮ್ ಕೋವಿಡ್ ಲಸಿಕೆಯನ್ನು ದೇಶದೊಳಗೇ ತಯಾರಿಸಲು ಯುಎಇ ಸಿದ್ಧತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಚೀನಾದ ಸಹಯೋಗದೊಂದಿಗೆ ದೇಶದೊಳಗೇ ಕೋವಿಡ್ ಲಸಿಕೆ ತಯಾರಿಸಲು ಯುಎಇ ಸಿದ್ಧತೆ ನಡೆಸುತ್ತಿದೆ. ‘ಯುಎಇಗ್ರೂಪ್42’ ಮತ್ತು ಚೀನಾದಸಿನೋಫಾರ್ಮ್ಜೊತೆಗೂಡಿ ತಯಾರಿಸಲಿರುವ ವ್ಯಾಕ್ಸಿನಿಗೆ ಹಯಾತ್ವ್ಯಾಕ್ಸ್ಎಂಬ ಹೆಸರು ನೀಡಲಾಗುವುದೆಂದು ವರದಿಯಾಗಿದೆ.

ಈಗಾಗಲೇಯುಎಇಯು ಬಳಸಲು ಅನುಮತಿಸಿದಸಿನೋಫಾರ್ಮ್ಲಸಿಕೆಯೇ ಹೊಸ ಹೆಸರಿನೊಂದಿಗೆ ಮತ್ತು ಹೆಚ್ಚಿನ ಕಾರ್ಯದಕ್ಷತೆಯೊಂದಿಗೆ ಬರಲಿರುವುದು. ‘ಸಿನೋಫಾರ್ಮ್ವ್ಯಾಕ್ಸಿನಿನ ಪರೀಕ್ಷೆಯೂ ಕೂಡಾ ಈ ಮೊದಲು ಯುಎಇಯಲ್ಲೇ ನಡೆದಿತ್ತು.

ಇದೀಗ ಚೀನಾ ವಿದೇಶಾಂಗ ಸಚಿವರಾದ ವಾಂಗ್ ಯೀ ಯುಎಇ ಭೇಟಿಯ ವೇಳೆಯಲ್ಲಿ ಹೊಸಲೈಫ್ ಸೈನ್ಸ್ಲಸಿಕೆ ತಯಾರಿಕಾ ಘಟಕದ ಉದ್ಘಾಟನೆ ನೆರವೇರಿತು. ಯುಎಇ ವಿದೇಶಾಂಗ ಸಚಿವ ಶೈಖ್ ಅಬ್ದುಲ್ಲಾ ಬಿನ್ ಝಾಯಿದ್ ಜೊತೆಗೂಡಿ, ವಾಂಗ್ ಯೀ ಅದನ್ನು ಉದ್ಘಾಟಿಸಿದರು.

ಅಬುಧಾಬಿಯ ಖಲೀಫಾ ಕೈಗಾರಿಕಾ ವಲಯದಲ್ಲಿ ನಿರ್ಮಾಣವಾಗಲಿರುವ ತಯಾರಿಕಾ ಘಟಕದಲ್ಲಿ(KIZAD) ವರ್ಷಕ್ಕೆ ಇನ್ನೂರು ಮಿಲಿಯನ್ ಡೋಸುಗಳನ್ನು ತಯಾರಿಸುವ ಗುರಿಯಿರಿಸಲಾಗಿದೆ. ‘ಸಿನೋಫಾರ್ಮ್‘ 79.34 ಶೇಕಡಾ ಕಾರ್ಯಕ್ಷಮತೆಯನ್ನು ತೋರಿಸಿದರೆ, ‘ಹಯಾತ್ವ್ಯಾಕ್ಸ್ಕಾರ್ಯಕ್ಷಮತೆಯು 86 ಶೇಕಡಾಗೆ ಏರಲಿದೆಯೆಂದು ಯುಎಇ ಹೇಳಿಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು