ಹತ್ರಾಸ್: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಯುವತಿಯ ತಂದೆಯ ಗುಂಡಿಟ್ಟು ಹತ್ಯೆ

hathras
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹತ್ರಾಸ್(02-03-2021): ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ 2018 ರಿಂದ ಜೈಲಿನಲ್ಲಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ 200ಕಿ.ಮೀ ದೂರದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.

ಹಳ್ಳಿಯ ದೇವಾಲಯದ ಹೊರಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದ ನಡುವೆ ಘರ್ಷಣೆ ನಡೆದಿದೆ. ಆ ಬಳಿಕ ನಡೆದ

ಗುಂಡಿನ ಚಕಮಕಿಯಲ್ಲಿ ಸಂತ್ರಸ್ತೆಯ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಯುವತಿಯ ತಂದೆ ವಿವರಿಸುವ ವಿಡಿಯೋ ವೈರಲ್ ಬೆನ್ನಲ್ಲಿ ಕೇಸ್ ದಾಖಲಿಸಿ ಆರೋಪಿ ಗೌರವ್ ಶರ್ಮಾನನ್ನು 2018ರಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅಂದಿನಿಂದ, ಎರಡೂ ಕುಟುಂಬಗಳು ಪರಸ್ಪರ ದ್ವೇಷಿಸುತ್ತಿದ್ದವು. ನಿನ್ನೆ ದೇವಸ್ಥಾನಕ್ಕೆ ತೆರಳಿದ್ದಾಗ ಎರಡೂ ಕುಟುಂಬಗಳ ಮಧ್ಯೆ ಮತ್ತೆ ಜಗಳವಾಗಿ, ಗೌರವ್ ಶರ್ಮಾ ಸಂತ್ರಸ್ತೆಯ ತಂದೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು