ನವದೆಹಲಿ(07-10-2020):ಉತ್ತರಪ್ರದೇಶದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ಸಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿರುವ ಯೋಗಿ ಸರಕಾರದ ನಡೆಯನ್ನು ಪಿಎಫ್ ಐ ಸಂಘಟನೆ ಖಂಡಿಸಿದೆ.
ಮುಜಫರ್ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್ನ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಅವರ ಬಂಧನವನ್ನು ಪಿಎಫ್ ಐ ಕಾನೂನು ಬಾಹಿರ ಎಂದು ಹೇಳಿದೆ.
ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ನಿನ್ನೆ ತೆರಳುತ್ತಿರುವಾಗ ಮಥುರಾದ ಮಠ ಟೋಲ್ ಪ್ಲಾಜಾದಲ್ಲಿ ನಾಲ್ವರನ್ನು ಪೊಲೀಸರು ಅನುಮಾನಾಸ್ಪದರು ಎಂದು ಹೇಳಿ ಬಂಧಿಸಿತ್ತು.