‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ಗೋಡ್ಸೆಯಂತೆ ಗುಂಡಿಟ್ಟು ಕೊಲ್ಲಲು ಬಯಸಿದ್ದೆ’ – ತಾನು ಬಯಸಿದ್ದನ್ನು ಬಹಿರಂಗವಾಗಿ ನುಡಿದ ಹಿಂದುತ್ವ ಸಾಧು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭಾರತದಲ್ಲಿ ದಿನಗಳು ಉರುಳಿದಂತೆ ಕೋಮು ಉದ್ವಿಗ್ನತೆಯ ಸ್ವರೂಪಗಳು ಉತ್ತುಂಗಕ್ಕೇರುತ್ತಿದೆ. ಬಹಿರಂಗವಾಗಿ ಕೊಲೆಯ ಬೆದರಿಕೆಗಳ ಮೂಲಕ, ಕೊಲೆಯ ಸಮರ್ಥನೆಗಳ ಮೂಲಕ ದ್ವೇಷದ ಭಾಷಣಗಳು ದೇಶದಲ್ಲಿ ಸರ್ವೇ ಸಾಮನ್ಯವಾಗಿ ಬಿಟ್ಟಿದೆ.

ಇದಕ್ಕೆ ಉತ್ತೇಜನ ನೀಡುವಂತಹ ಒಂದು ಘಟನೆಗೆ ನಿನ್ನೆ ಭಾರತ ಸಾಕ್ಷಿಯಾಯಿತು. ಬಿಹಾರದ ಹರಿದ್ವಾರದಲ್ಲಿ ಹಿಂದುತ್ವ ಕಾರ್ಯಕ್ರಮವೊಂದರಲ್ಲಿ ಹಿಂದುತ್ವ ಸಾಧುಗಳು ಮುಸ್ಲಿಮರ ಮಾರಣಹೋಮಕ್ಕೆ ಎಲ್ಲರೂ ಸಜ್ಜಾಗಬೇಕು, ಆಯುಧ ಭರಿತರಾಗಿ ಮುಸ್ಲಿಮರ ಸಾಮೂಹಿಕ ಕೊಲೆಗೆ ಸಿದ್ಧರಾಗಬೇಕು ಇಂತಹ ಹಲವು ಉದ್ರೇಕಕಾರಿ ಭಾಷಣವನ್ನು ಮಾಡುವ ಮೂಲಕ ಅಲ್ಲಿ ಸೇರಿದ ಹಿಂದುತ್ವ ಕಾರ್ಯಕರ್ತರನ್ನು ಪ್ರಚೋದನೆಗೊಳಿಸುತ್ತಾನೆ.

ಇಷ್ಟು ಮಾತ್ರವಲ್ಲದೆ ‘ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಲೋಸಭೆಯಲ್ಲಿ ‘ರಾಷ್ಟ್ರೀಯ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕಿದೆ, ಅದರಲ್ಲೂ ಮುಸ್ಲಿಮರಿಗೆ’ ಎಂದು ಹೇಳಿದ ಸಂದರ್ಭದಲ್ಲಿ ಒಂದು ವೇಳೆ ನಾನಿದ್ದಿದ್ದರೆ ಅವರನ್ನು ನಾಥುರಾಮ್ ಗೋಡ್ಸೆ ಗಾಂಧಿಯನ್ನು ಕೊಂದಹಾಗೆ, ಎದೆಯನ್ನು ಗುರಿಯಾಗಿಟ್ಟುಕೊಂಡು 6 ಸಲ ರಿವಾಲ್ವರ್ ಮೂಲಕ ಗುಂಡಿಟ್ಟು ಕೊಲ್ಲುತ್ತಿದ್ದೆ’ ಎಂದು ತಾನು ಬಯಸಿದ್ದನ್ನು ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗಿಯಾದ ಧರ್ಮದಾಸ್ ಮಹಾರಾಜ್ ಬಹಿರಂಗವಾಗಿ ಹೇಳುತ್ತಾರೆ.

ಇದರ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಹಲವು ವಿರೋಧಾಭಾಸಗಳು, ಆಕ್ರೋಶಗಳು ವ್ಯಕ್ತವಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು