ನಾಪತ್ತೆಯಾದ 500ಕ್ಕೂ ಅಧಿಕ ಮಕ್ಕಳನ್ನು ಮನೆಗೆ ಸೇರಿಸಿದ ಎಸ್ ಐ| ಪೊಲೀಸ್ ಇಲಾಖೆಯ ಹೆಮ್ಮೆ ಪಡುವ ದಕ್ಷ ಅಧಿಕಾರಿಗೆ ಗೌರವ

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಒಡಿಶಾ (25-01-2021): ಒಡಿಶಾದ ಕಟಕ್‌ನಲ್ಲಿ ನಡೆದ ಸಮಾರಂಭದಲ್ಲಿ 500 ಕ್ಕೂ ಹೆಚ್ಚು ಮಕ್ಕಳು ತಮ್ಮ ಮನೆಗಳಿಗೆ ಮರಳಲು ಸಹಾಯ ಮಾಡಿದ ಹರಿಯಾಣ ಪೊಲೀಸ್ ಅಧಿಕಾರಿಗೆ ಸನ್ಮಾನವನ್ನು ಮಾಡಲಾಗಿದೆ.

ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಎಎಸ್‌ಐ ರಾಜೇಶ್ ಕುಮಾರ್ ಅವರ ಗಮನಾರ್ಹ ಬದ್ಧತೆಗೆ ಪೊಲೀಸ್ ಇಲಾಖೆಯೇ ಹೆಮ್ಮೆ ಪಡುವಂತಾಗಿದೆ.

ಎಎಸ್ಐ ರಾಜೇಶ್ ಕುಮಾರ್ ಅವರನ್ನು ಏಮ್ಸ್ ನ ಮಾಜಿ ನಿರ್ದೇಶಕ ಡಾ.ಅಶೋಕ್ ಕುಮಾರ್ ಮಹಾಪಾತ್ರ ಅವರು ಸಬಿತ್ರಿ ಜನ ಸೇವಾ ಎಂಬ ಸಾಮಾಜಿಕ ಸಂಘಟನೆಯು ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿದ್ದಾರೆ.

ಈ ಸೇವೆಗೆ ನನ್ನ ಎಲ್ಲ ಹಿರಿಯ ಅಧಿಕಾರಿಗಳಿಂದ ನನಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ನನ್ನ ಕುಟುಂಬ ನನ್ನ ಕೆಲಸದ  ಸಮಯಗಳ , ಜವಾಬ್ದಾರಿ ಮತ್ತು ಕರ್ತವ್ಯವನ್ನು ಅರ್ಥಮಾಡಿಕೊಂಡಿದೆ. ಇದರಿಂದಾಗಿ ಹೆಚ್ಚು ಸೇವೆ ಮಾಡಲು ನನಗೆ ಸಾಧ್ಯವಾಗಿದ ಎಂದು ಸನ್ಮಾನ ಸ್ವೀಕರಿಸಿದ ಬಳಿಕ ರಾಜೇಶ್ ಕುಮಾರ್ ಹೇಳಿದ್ದಾರೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು