ಭಾರತದ ಹರ್ನಾಝ್ ಗೆ ವಿಶ್ವ ಸುಂದರಿ ಪಟ್ಟ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭಾರತದ ಹರ್ನಾಝ್​ ಸಂಧು 2021ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2000 ನೇ ಇಸವಿಯಲ್ಲಿ ಭಾರತದ ಲಾರಾ ದತ್ತಾ ಈ ಮೊದಲು  ಪ್ರಶಸ್ತಿಯನ್ನು ಗೆದ್ದಿದ್ದರು.  ಇದೀಗ 21 ವರ್ಷಗಳ ನಂತರ ಭಾರತದ ರೂಪದರ್ಶಿಗೆ ವಿಶ್ವ ಸುಂದರಿ ಪಟ್ಟ ಒಲಿದು ಬಂದಿದೆ. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021 ರಲ್ಲಿ ಸಂಧು ಭಾರತವನ್ನು ಪ್ರತಿನಿಧಿಸಿದ್ದರು.

21 ವರ್ಷದ ಹರ್ನಾಝ್​ ಸಂಧು ಪಂಜಾಬ್‌ ಮೂಲದವರಾಗಿದ್ದು, ಪೆರುಗ್ವೆಯಯ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಅವರನ್ನು ಹಿಂದಿಕ್ಕಿ ಭುವನ ಸುಂದರಿ   ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹರ್ನಾಝ್​ ಸಂಧು ಅವರಿಗೆ ಮೆಕ್ಸಿಕೋದ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು