ಹೊಸದೆಹಲಿ(19/10/2020): ‘2021ರ ಸಾಲಿನ ಹಜ್ ಯಾತ್ರೆ ಜೂನ್ – ಜುಲೈನಲ್ಲಿ ನಿಗದಿಯಾಗಿದ್ದು, ಭಾರತೀಯ ಹಜ್ ಸಮಿತಿ ಮತ್ತು ಇತರೆ ಭಾರತೀಯ ಸಂಸ್ಥೆಗಳು ಸಾಂಪ್ರದಾಯಿಕವಾಗಿ ಹಜ್ ಯಾತ್ರೆಗೆ ಅರ್ಜಿ ಆಹ್ವಾನದಂತಹ ಪ್ರಕ್ರಿಯೆಗಳನ್ನು ನಡೆಸುತ್ತಿವೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಹಜ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `2021ರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕೋವಿಡ್ 19 ಮಾರ್ಗಸೂಚಿಗಳನ್ನು ಆಧರಿಸಿ ಹಾಗೂ ಸೌದಿ ಅರೇಬಿಯಾ ಸರ್ಕಾರದ ಅಂತಿಮ ಕರೆಯನ್ನು ಪರಿಗಣಿಸಿ ಮುಂದಿನ ವರ್ಷದ ಹಜ್ ಯಾತ್ರೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾ ಮತ್ತು ಭಾರತ ಸರ್ಕಾರ ಹೊರಡಿಸುವ 2021ರ ಕೊರೋನಾ ಮಾರ್ಗಸೂಚಿ ಅನ್ವಯ ‘ಹಜ್ 2021‘ ಯಾತ್ರೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ‘ ಎಂದು ನಖ್ವಿ ತಿಳಿಸಿದ್ದಾರೆ.