ಯುಎಇ: ಹದಿನಾರು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಆರಂಭ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ನಿವಾಸಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಯುಎಇ ಆರೋಗ್ಯ ಸಚಿವಾಲಯವು ತಿಳಿಸಿದೆ. ವೃದ್ಧರು ಮತ್ತು ವಿವಿಧ ಅನಾರೋಗ್ಯಗಳಿಂದ ಬಳಲುತ್ತಿರುವವರಿಗೆ ಲಸಿಕೆಯು ದೊರೆಯುವುದನ್ನು ಖಾತರಿಪಡಿಸಿದ ಬಳಿಕ ಯುಎಇ ಸರಕಾರವು ನಡೆಗೆ ಮುಂದಾಗಿದೆ.

ಇಂದಿನಿಂದ ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಿವಾಸಿಗಳಿಗೂ ಕೋರೋನಾ ಲಸಿಕೆ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆದೇಶದ ಇನ್ನೂರ ಐದು ಆರೋಗ್ಯ ಕೇಂದ್ರಗಳು ಉಚಿತ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ನಿರತವಾಗಿವೆ.

ರೋಗಿಗಳು ಮತ್ತು ವೃದ್ಧರಲ್ಲಿ ಸುಮಾರು ಎಪ್ಪತ್ತೆರಡು ಶೇಕಡಾ ಮಂದಿಯೂ, ಒಟ್ಟು ನಿವಾಸಿಗಳಲ್ಲಿ ಐವತ್ತಾರು ಶೇಕಡಾ ಜನರೂ ಈಗಾಗಲೇ ವ್ಯಾಕ್ಸಿನ್ ಪಡೆದಿರುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು