ಸಚಿವರಾಗುವ ವಿಶ್ವನಾಥ್ ಕನಸು ಭಗ್ನ| ಶಾಸಕರಾಗಿದ್ದರೂ, ವಿಶ್ವನಾಥ್ ಗೆ ಹೈಕೋರ್ಟ್ ತಡೆಯೊಡ್ಡಿದ್ದೇಕೆ ಗೊತ್ತಾ?

vishwanath
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (30-11-2020): ಸಚಿವರಾಗುವ ಎ.ಎಚ್. ವಿಶ್ವನಾಥ್ ಕನಸಿಗೆ ಹೈಕೋರ್ಟ್ ತಡೆ ನೀಡಿದೆ.

ಎ.ಎಚ್. ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಳಿಕ ನಡೆದ ಉಪಚುನಾವಣೆಯಲ್ಲಿ ಸೋತಿದ್ದರು. ಬಳಿಕ ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡು ಶಾಸಕರಾಗಿದ್ದರು. ಇದರಿಂದಾಗಿ ಸಚಿವರಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಶಾಸಕರ ಅನರ್ಹತೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಹಿನ್ನಲೆಯಲ್ಲಿ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಹೇಳಿದೆ. ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ವಿಶ್ವನಾಥ್ ಅವರು ಅನರ್ಹ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ಎ.ಹೆಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಗೆ ಸಚಿವ ಸ್ಥಾನ‌ ನೀಡದಂತೆ ಕೋರಿ ವಕೀಲ ಎ.ಎಸ್. ಹರೀಶ್ ಪಿಐಎಲ್​ ಸಲ್ಲಿಸಿದ್ದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು