ಕಾಬೂಲ್ ಯುನಿವರ್ಸಿಟಿಯಲ್ಲಿ ಗುಂಡಿನ ದಾಳಿ; ಕನಿಷ್ಠ 19 ಮಂದಿ ಸಾವು

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಕಾಬೂಲ್(02/11/2020): ಅಪ್ಘಾನಿಸ್ತಾನದ ಕಾಬೂಲ್ ವಿಶ್ವ ವಿದ್ಯಾಲಯದಲ್ಲಿ ಬಂದೂಕುಧಾರಿ ವ್ಯಕ್ತಿಗಳು ಸೋಮವಾರ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

ದಾಳಿಯಲ್ಲಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಗಾಯಗೊಂಡಿರುವುದಾಗಿ ವರದಿಯಾಗಿದೆ. ನಿಖರವಾದ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಅಫ್ಗಾನಿಸ್ತಾನದ ರಾಜಧಾನಿಯ ಪ್ರಮುಖ ವಿದ್ಯಾ ಕೇಂದ್ರವಾಗಿರುವ ಕಾಬೂಲ್‌ ಯೂನಿವರ್ಸಿಟಿಯಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಫ್ಗಾನಿಸ್ತಾನದಲ್ಲಿನ ಇರಾನ್‌ನ ರಾಯಭಾರಿ ಸಹ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಗುಂಡಿನ ದಾಳಿಯಿಂದ ವಿಶ್ವವಿದ್ಯಾಲಯದಲ್ಲಿ ಸಾವಿಗೀಡಾಗಿರುವವರ ವಿವರವನ್ನು ಅಫ್ಗಾನಿಸ್ತಾನ ಆಂತರಿಕ ವ್ಯವಹಾರಗಳ ಸಚಿವಾಲಯದ ವಕ್ತಾರ ತಾರಿಕ್‌ ಅರಿಯಾನ್‌ ಬಹಿರಂಗ ಪಡಿಸಿಲ್ಲ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸುಮಾರು 20 ಜನ ಮೃತಪಟ್ಟಿದ್ದಾರೆ.

‘ಮೂವರು ಹಂತಕರು ದಾಳಿ ನಡೆಸಿದ್ದು, ಎಲ್ಲ ದಾಳಿಕೋರರು ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾರೆ’ ಎಂದು ವಕ್ತಾರರು ಹೇಳಿದ್ದಾರೆ.

‘ಈ ದಾಳಿಯಲ್ಲಿ ಭಾಗಿಯಾಗಿಲ್ಲ’ ಎಂದು ತಾಲಿಬಾನ್‌ ಪ್ರಕಟಣೆ ಹೊರಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು