ಆಟಿಕೆ ಗನ್ ನಿಂದ ಬೆದರಿಸಿ ಬಾಲಕಿಯರ ಅಪಹರಣಕ್ಕೆ ಯತ್ನಿಸಿದ ಯುವಕ…ಮುಂದೇನಾಯ್ತು ಓದಿ

gun
Share on facebook
Share on twitter
Share on linkedin
Share on whatsapp
Share on telegram
Share on email
Share on print

ನಾಗ್ಪುರ(25-10-2020): ನಾಗ್ಪುರದಲ್ಲಿ ಇಬ್ಬರು ಸಹೋದರಿಯರನ್ನು ಆಟಿಕೆ ಗನ್ನಿಂದ ಬೆದರಿಕೆ ಹಾಕಿ ಅಪಹರಿಸಲು 24 ವರ್ಷದ ಯುವಕ ವಿಫಲ ಪ್ರಯತ್ನ ನಡೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ವ್ಯಕ್ತಿಯನ್ನು ರೋಶನ್ ಖಂಡೇಕರ್ ಎಂದು ಗುರುತಿಸಲಾಗಿದೆ. ಈತ ಧರಂಪೇತ್ ಪ್ರದೇಶದ ಇಬ್ಬರು ಸಹೋದರಿಯರನ್ನು ಬೆದರಿಸಿ ಕಿಡ್ನಾಪ್ ಗೆ ಪ್ರಯತ್ನಿಸಿದ್ದರು ಎಂದು ಅಂಬಾಜಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾಪಿಂಗ್ ಮುಗಿಸಿಕೊಂಡು ಬಂದ ಬಾಲಕಿಯರು ಖಂಡೇಕರ್ ಕಾರಿನಲ್ಲಿ ಡ್ರಾಪ್ ಗೆ ಕುಳಿತಿದ್ದರು. ಈ ವೇಳೆ ಖಂಡೇಕರ್ ಬಂದು ಆಟಿಕೆ ಗನ್ ಹಿಡಿದು ಬೆದರಿಕೆ ಹಾಕಿದ್ದಾನೆ. ಈ ವೇಳೆ ಬಾಲಕಿಯರು ಗನ್ ನಕಲಿ ಎಂದು ಅರ್ಥೈಸಿದ್ದಾರೆ ಮತ್ತು ಬೊಬ್ಬೆ ಹಾಕಿದ್ದಾರೆ. ಈ ವೇಳೆ ಆತ ಪರಾರಿಯಾಗಿದ್ದಾನೆ.

ಕಿಡ್ನಾಪರ್ ಮಿನಿ ಟ್ರಕ್ ನ ನಂಬರ್ ಪ್ಲೇಟ್ ಬಳಸಿ ಬಾಲಕಿಯರನ್ನು ಅಪಹರಣಕ್ಕೆಮುಂದಾಗಿದ್ದ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಈತ ತನ್ನ ಬಳಿ 2.5 ಲಕ್ಷ ರೂಪಾಯಿ ಸಾಲವಿದೆ ಮತ್ತು ಸುಲಿಗೆಗಾಗಿ ಬಾಲಕಿಯರನ್ನು ಅಪಹರಿಸಲು ಕಾಯುತ್ತಿದ್ದೆ ಎಂದು ಹೇಳಿದ್ದಾನೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು