ಗುಜರಾತ್ (05-12-2020): ಗುಜರಾತ್ನ ನಸ್ವಾಡಿ ಪಟ್ಟಣದಲ್ಲಿ 30 ವರ್ಷದ ಶಾಲಾ ಪ್ರಾಂಶುಪಾಲರೊಬ್ಬರನ್ನು ಸಂಬಂಧಿಕನೋರ್ವ ಇರಿದು ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಪತ್ನಿ ಮತ್ತು ಅಪ್ರಾಪ್ತ ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ನಡೆದ ಘಟನೆ ನಂತರ ಸ್ಥಳದಿಂದ ಪರಾರಿಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕ ಆರೋಪಿ ಭಾರತ್ ಪಿಥಿಯಾ (28) ಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ನಾಸ್ವಾಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಿ ಡಿ ಪಟೇಲ್ ತಿಳಿಸಿದ್ದಾರೆ.
ಮೃತ ಪ್ರಿನ್ಸಿಪಾಲ್ ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಆರೋಪಿ ಅವರ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದರು. ಏಕಾಏಕಿ ದುಷ್ಕರ್ಮಿಬಂದು ಕೃತವನ್ನು ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪ್ರಿನ್ಸಿಪಾಲ್ ಮೆರಮಾನ್ ಅವರನ್ನು ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಅವರ ಪತ್ನಿ ಮತ್ತು ಮಗಳು ನಸ್ವಾಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.