ಗುಜರಾತ್ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ. 18 ಮಂದಿ ಕೊರೋನ ಸೋಂಕಿತರು ದಾರುಣ ಮೃತ್ಯು ಹಾಗೂ ಹಲವು ರೋಗಿಗಳಿಗೆ ಗಂಭೀರ ಗಾಯ.

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗುಜರಾತ್: ಅಹ್ಮದಾಬಾದ್ ನ ಬರೂಚ್ ಎಂಬ ಪ್ರದೇಶದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಕನಿಷ್ಟ 18 ಮಂದಿ ಕೊರೋನ ಸೋಂಕಿತರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಘಟನೆಯಲ್ಲಿ ಇನ್ನೂ ಹಲವರು ಗಂಭೀರ ಗಾಯಗೊಳಗಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಅಲ್ಲಿನ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ ಒಟ್ಟು 18 ಮಂದಿ ಜೀವ ಕಳೆದುಕೊಂಡಿದ್ದು, ಘಟನೆ ನಡೆದ ಆ ಕ್ಷಣದಲ್ಲೇ 12 ಮಂದಿ ಮೃತಪಟ್ಟಿರುವುದು ಧೃಡಪಟ್ಟಿದೆ.

ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಸಿಗೆ, ಸ್ಟ್ರೆಚರ್ ಗಳಲ್ಲೇ ಸುಟ್ಟು ಕರಕಲಾಗಿರುವ ಭೀಕರ ದೃಶ್ಯಗಳು ಹೃದಯ ಕಲಕುವಂತಿದೆ.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣಗಳು ಇನ್ನೂ ಕೂಡ ತಿಳಿದುಬಂದಿಲ್ಲ.

ನಾಲ್ಕು ಮಹಡಿಗಳ ಈ ವೆಲ್ಫೇರ್ ಆಸ್ಪತ್ರೆಯಲ್ಲಿ ಮಧ್ಯ ರಾತ್ರಿಯಲ್ಲಿ ನಡೆದ ಈ ದುರ್ಘಟನೆ ಸಂಧರ್ಭದಲ್ಲಿ 50 ಮಂದಿ ಇತರ ರೋಗಿಗಳು ಕೂಡ ಇದ್ದರು ಎಂದು ತಿಳಿದುಬಂದಿದೆ.

ಅವರನ್ನು ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ಪಾರು ಮಾಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು