ಗುಜರಾತ್: ಗೋಧಾಮ್ ಮಹಾತೀರ್ಥ ಪಾಠಮೇದದ ಗೋಶಾಲೆಯಿಂದ ಕೋವಿಡ್ ರೋಗಿಗಳಿಗೆ ದನದ ಗಂಜಲದಿಂದ ಮದ್ದು!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಾಂಧಿನಗರ: ಗುಜರಾತಿನ ಹಳ್ಳಿಯೊಂದರಲ್ಲಿ ಗೋ ಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗಿದ್ದು, ಅಲ್ಲಿ ದನದ ಗಂಜಲದಿಂದ ಮಾಡಿದ ಮದ್ದನ್ನು ಕೋವಿಡ್ ರೋಗಿಗಳಿಗೆ ಕೊಡಲಾಗುತ್ತಿದೆ ಎಂದು ವರದಿಯಾಗಿದೆ.

ಉತ್ತರ ಗುಜರಾತಿನ ಬನಸಕಾಂತ ಜಿಲ್ಲೆಯಲ್ಲಿರುವ ತೆಟೋಡ ಎಂಬಲ್ಲಿ ರಾಜಾರಾಮ್ ಗೋಶಾಲಾ ಆಶ್ರಮ ಎಂಬ ಹೆಸರಿನಲ್ಲಿರುವ ಗೋ ಶಾಲೆಯೊಂದು ಮೇ ಐದರಂದು ಉದ್ಘಾಟನೆಯಾಗಿದೆ. ಇದು ಗೋಧಾಮ್ ಮಹಾತೀರ್ಥ ಪಾಠಮೇದ ಎಂಬ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಘಟಕವಾಗಿದೆ.

ಇಲ್ಲಿ ದನದ ಗಂಜಲ, ಹಾಲು ಮತ್ತು ಅದರ ಉತ್ಪನ್ನಗಳಿಂದ ಮದ್ದು ತಯಾರಿಸಲಾಗುತ್ತಿದೆ ಎಂದು ಪಾಠಮೇದದ ಟ್ರಸ್ಟಿಯೆಂದು ಗುರುತಿಸಿಕೊಂಡಿರುವ ಮೋಹನ್ ಜಾಧವ್ ಎಂಬಾತ ಮಾಹಿತಿ ನೀಡಿದ್ದಾನೆ.

ಗುಜರಾತಿನಲ್ಲಿ ಗ್ರಾಮಗಳ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರುಗಳನ್ನ ಸ್ಥಾಪಿಸಲು ಅನುಮತಿಯಿದೆ. ಇದನ್ನೇ ಬಳಸಿಕೊಂಡ ಇವರು ಐಸಲೇಶನ್ ಸೆಂಟರನ್ನೂ ಸ್ಥಾಪಿಸಿದ್ದಾರಲ್ಲದೇ ಅಲ್ಲಿ ದನದ ಗಂಜಲ, ಹಾಲುಗಳಿಂದ ತಯಾರಿಸಿದ ಮದ್ದನ್ನು ಕೋವಿಡ್ ರೋಗಿಗಳಿಗೆ ಕೊಡುತ್ತಿದ್ದಾರೆ.

ಆದರೆ ಗಂಭೀರಾವಸ್ಥೆಯಲ್ಲಿರುವ ಕೋವಿಡ್ ರೋಗಿಗಳನ್ನು ಇಲ್ಲಿ ಸೇರಿಸಿಕೊಳ್ಳಲಾಗುತ್ತಿಲ್ಲ ಎನ್ನಲಾಗಿದೆ. ಸಣ್ಣದಾಗಿ ಕೋವಿಡ್ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ದನದ ಗಂಜಲ, ಹಾಲು ಇತ್ಯಾದಿಗಳಿಂದ ಮಾಡಿದ ಎಂಟು ಉತ್ಪನ್ನಗಳನ್ನು ಮದ್ದಾಗಿ ಕೊಡಲಾಗುತ್ತಿದೆ ಎಂದು ಮೋಹನ್ ಜಾಧವ್ ಹೇಳುತ್ತಾನೆ.

ಅಗತ್ಯವೆಂದು ಕಂಡು ಬಂದರೆ ಅಲೋಪಥಿ ಔಷಧಿಗಳನ್ನೂ ನೀಡಲಾಗುತ್ತದೆ. ಹಾಗಾಗಿ ಇಬ್ಬರು ಅಲೋಪಥಿ ವೈದ್ಯರನ್ನೂ ಸೇವೆಗೆ ನಿಯೋಗಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು