ಬೆಂಗಳೂರು(14-02-2021): ‘ಫ್ರೈಡೇಸ್ ಫಾರ್ ಫ್ಯೂಚರ್’ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿ ಅವರನ್ನು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರ ‘ಟೂಲ್ಕಿಟ್’ ಟ್ವೀಟ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ರವಿ ಅವರಿಗೆ 21 ವರ್ಷ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಥನ್ಬರ್ಗ್ ತನ್ನ ಪೋಸ್ಟ್ನಲ್ಲಿ ರೈತರಿಗಾಗಿ ಸೂಚಿಸಿದ್ದ ಟೂಲ್ಕಿಟ್ ನ್ನು ಪ್ರಸಾರ ಮಾಡುವಲ್ಲಿ ಅವಳು ಸಕ್ರಿಯಳಾಗಿದ್ದಳು ಎಂದು ಹೇಳಿದ್ದಾರೆ.
ಟೂಲ್ಕಿಟ್ ಬರೆದ ಥನ್ಬರ್ಗ್ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ದೆಹಲಿ ಪೊಲೀಸರ ಸೈಬರ್-ಅಪರಾಧ ಕೋಶ ಎಫ್ಐಆರ್ ದಾಖಲಿಸಿದೆ. 18 ವರ್ಷದ ಹವಾಮಾನ ಬದಲಾವಣೆ ಕಾರ್ಯಕರ್ತೆ ತನ್ನ ಟ್ವೀಟ್ ನ್ನು ಆ ಬಳಿಕ ಅಳಿಸಿದ್ದಾರೆ. ಅಂತರಾಷ್ಟ್ರೀಯ ಪಿತೂರಿ ಎಂದು ಆರೋಪಿಸಿ ಆಕೆಯ ಪೋಸ್ಟ್ ನ ಸ್ಕ್ರೀನ್ಶಾಟ್ಗಳು ವೈರಲ್ ಆಗಿದ್ದವು.
ಗ್ರೇಟ ಥನ್ಬರ್ಗ್ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಬೆಂಬಲಸಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಗಳು ಭಾರತದಲ್ಲಿ ನಡೆದಿದೆ.