ಗ್ರೀನ್ ಕಾರ್ಡ್ ಮೂಲಕ ಬಡವರಿಗೆ 1 ರೂ.ಗೆ ರೇಷನ್

ration card
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(10-10-2020): ಗ್ರೀನ್ ರೇಷನ್ ಕಾರ್ಡ್ ಮೂಲಕ ಬಡವರಿಗೆ 1 ರೂ.ಗೆ ಒಂದು ಕೆಜಿ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

 ಕೇಂದ್ರ ಸರ್ಕಾರದ ಸೂಚನೆಯಂತೆ ಈಗಾಗಲೇ ಹರ್ಯಾಣ, ಜಾರ್ಖಂಡ್ ರಾಜ್ಯಗಳು ಈ ಯೋಜನೆ ಜಾರಿಗೆ ಮುಂದಾಗಿದೆ. ನ. 15 ರಿಂದ ಜಾರ್ಖಂಡ್ ನಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಗ್ರೀನ್ ರೇಷನ್ ಕಾರ್ಡ್ ಪಡೆಯಲು ಫಲಾನುಭವಿಗಳ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರಗಳು, ವಸತಿ ಮತ್ತು ಮತದಾರರ ಕಾರ್ಡ್ ಗಳು ಕಡ್ಡಾಯವಾಗಿರುತ್ತವೆ.

ಗ್ರೀನ್ ರೇಷನ್ ಕಾರ್ಡ್ ಪಡೆಯಲು ಸಾರ್ವಜನಿಕ ಸೇವಾ ಕೇಂದ್ರ ಮತ್ತು ಆಹಾರ ಪೂರೈಕೆ, ಪಿಡಿಎಸ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು