ಗ್ರೇಟ್ ಖಲಿ ಯಾಕೆ ಗ್ರೇಟ್ ಆದ್ರು ಗೊತ್ತಾ?

great khali
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(03-12-2020):WWE ಮಾಜಿ ಚಾಂಪಿಯನ್ ಗ್ರೇಟ್ ಖಲಿದೆಹಲಿ ಚಲೋ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವಿಡಿಯೋವನ್ನು ಹಂಚಿಕೊಂಡಿದ್ದು, ರೈತರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.ಆಮೂಲಕ ಮತ್ತೆ ಗ್ರೇಟ್ ಆಗಿದ್ದಾರೆ.

ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ನೀಡಿರುವ ಗ್ರೇಟ್ ಖಲಿ, ದೇಶದ ಜನರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಬೇಕು.

ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಕೇಂದ್ರದ ಕಾನೂನುಗಳು ಮಾರಕವಾಗಲಿದೆ. ಮತ್ತು ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಅವರಿಗೆ ಬೆಂಬಲವನ್ನು ನೀಡುವಂತೆ ಗ್ರೇಟ್ ಖಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ರೈತರು ದೇಶದ ವಿವಿಧ ಭಾಗಗಳಿಂದ ಆಗಮಿಸಿ ಕಳೆದ 8 ದಿನಗಳಿಂದ ಕೇಂದ್ರದ ರೈತ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ರೈತರ ಜೊತೆಗಿನ ಕೇಂದ್ರದ ಮಾತುಕತೆ ಬೆನ್ನಲ್ಲೇ ಖಲಿಯ  ಹೇಳಿಕೆ ಹೊರಬಿದ್ದಿದೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು