ಗ್ರಾಮ ಪಂಚಾಯತ್ ಚುನಾವಣೆ| 5ಕ್ಕಿಂತ ಹೆಚ್ಚು ಜನರು ಪ್ರಚಾರಕ್ಕೆ ತೆರಳುವಂತಿಲ್ಲ

voting
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(05-12-2020): ಗ್ರಾಮ ಪಂಚಾಯತ್ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಈ ಮಧ್ಯೆ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚುನಾವಣೆ ಪ್ರಚಾರಕ್ಕೆ ನಿರ್ಬಂಧ ವಿಧಿಸಿ ನೂತನ ಆದೇಶವನ್ನು ಹೊರಡಿಸಿದೆ.

ಗ್ರಾಮ ಪಂಚಾಯತ್ ಅಭ್ಯರ್ಥಿಗಳ ಪರ ಮನೆಮನೆ ಪ್ರಚಾರದ ವೇಳೆ  ಕೊರೊನಾ ಮಾರ್ಗಸೂಚಿಯನ್ವಯ ಗರಿಷ್ಠ 5 ಮಂದಿ ಮಾತ್ರ ತೆರಳಬೇಕಿದೆ. ಪ್ರಚಾರದ ವೇಳೆ ಸಾಮಾಜಿಕ ಅಂತರ ಕಾಯ್ದು ಕೊಂಡು ಮನೆ-ಮನೆ ಭೇಟಿ ನೀಡಿ ಪ್ರಚಾರ ನಡೆಸಬೇಕು. ಪ್ರಚಾರದ ಸಂದರ್ಭ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಫೇಸ್‌ಮಾಸ್ಕ್ ಧರಿಸಿರ
ಬೇಕು.

ಕರಪತ್ರಗಳನ್ನು ಹಂಚುವವರು ಕಡ್ಡಾಯವಾಗಿ ಫೇಸ್‌ಮಾಸ್ಕ್ ಹ್ಯಾಂಡ್‌ಗ್ಲೌಸ್‌ ಧರಿಸಬೇಕು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಉಪಯೋಗಿಸಬೇಕು.

ಅಭ್ಯರ್ಥಿಗಳು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ತಮ್ಮ ಕ್ಷೇತ್ರಗಳಲ್ಲಿ ಸಭೆ ಸಮಾರಂಭಗಳನ್ನು ಮಾಡಬಹುದು. ಕೊರೊನಾ ಪಾಸಿಟಿವ್‌ ಇರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪ್ರಚಾರ ನಡೆಸಬಹುದು. ಸೋಂಕಿತರು ಖುದ್ದಾಗಿ ಪ್ರಚಾರ  ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್‌ ಸೋಂಕಿತರು ಹಾಗೂ ಕೋವಿಡ್‌ ಶಂಕಿತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಬಹುದಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು