ಬೆಂಗಳೂರು(19-01-2021):ಗೋರಕ್ಷಕರ ಮೇಲಿನ ಕೇಸ್ ಗಳನ್ನು ಕೈ ಬಿಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಈ ಮೂಲಕ ಮೊದಲು ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿ ಮಾಡಿದವರನ್ನು ಬೆಂಬಲಿಸಿ ರಕ್ಷಿಸಲು ರಾಜ್ಯ ಸರಕಾರ ಮುಂದಾಗಿದೆ.
ಈ ಮೊದಲು ರಾಜ್ಯದಲ್ಲಿ ಗೋ ಸಾಗಣೆ ತಡೆಗೆ ಯತ್ನಿಸಿದ ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯುವ ಕುರಿತು ಚಿಂತನೆ ನಡೆದಿದೆ. ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಭು ಚವ್ಹಾಣ್ ಹೇಳಿದ್ದಾರೆ.
ಇನ್ನು ಮುಂದೆ ಕೂಡ ಗೋ ರಕ್ಷಕರ ಮೇಲೆ ಪೊಲೀಸರು ಕ್ರಮವನ್ನು ಕೈಗೊಳ್ಳಬಾರದು ಎಂದು ಪೊಲೀಸರಿಗೆ ಸೂಚಿಸಿದ ಸಚಿವರು ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ ಗೋಶಾಲೆಗಳಿಗೆ ಹೆಚ್ಚು ಗೋವುಗಳು ಬರುತ್ತಿವೆ ಎಂದು ಹೇಳಿದ್ದಾರೆ.