30ಕ್ಕೂ ಹೆಚ್ಚು ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ ಸರಕಾರ

vikas dubey
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(22-11-2020): ನಟೋರಿಯಸ್ ರೌಡಿ ಹತ್ಯೆಗೀಡಾದ ದುಬೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರ ರಾಜ್ಯ ಡಿಜಿಪಿಗೆ ನಿರ್ದೇಶನ ನೀಡಿದೆ.

ಈ ವರ್ಷದ ಜುಲೈನಲ್ಲಿ ದರೋಡೆಕೋರ ವಿಕಾಸ್ ದುಬೆ ಅವರ ಸಹಾಯಕರು ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದರು.

ಈ ತಿಂಗಳ ಆರಂಭದಲ್ಲಿ ಡಿಜಿಪಿಗೆ ಬರೆದ ಪತ್ರದಲ್ಲಿ  ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ. ಚೌಬೆಪುರ ಎಸ್‌ಎಚ್‌ಒ ವಿನಯ್ ತಿವಾರಿ ಸೇರಿದಂತೆ ಎಂಟು ಮಂದಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಪೊಲೀಸರು ಮತ್ತು ಹತ್ಯೆಗೀಡಾದ ದರೋಡೆಕೋರ ವಿಕಾಸ್ ದುಬೆ ನಡುವಿನ ಸಂಬಂಧದ ಬಗ್ಗೆ ಎಸ್‌ಐಟಿ ತನಿಖೆ ನಡೆಸಿದ ನಂತರ ಕಳೆದ ವಾರ ರಾಜ್ಯ ಸರ್ಕಾರ ಅಂದಿನ ಕಾನ್ಪುರ ಪೊಲೀಸ್ ಮುಖ್ಯಸ್ಥ ಅನಂತ್ ದೇವ್ ಅವರನ್ನು ಅಮಾನತುಗೊಳಿಸಿತ್ತು.

ಅನಂತ್ ದೇವ್ ಅವರನ್ನು ಅಮಾನತುಗೊಳಿಸಲಾಗಿದೆ. ಎಸ್ಐಟಿ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಕುಮಾರ್ ಅವಸ್ಥಿ ಹೇಳಿದ್ದಾರೆ.

ಜುಲೈ 2 ರ ಮಧ್ಯರಾತ್ರಿಯ ನಂತರ ದುಬೆ ಅವರನ್ನು ಬಂಧಿಸಲು ತೆರಳುತ್ತಿದ್ದಾಗ ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ಎಂಟು ಪೊಲೀಸರನ್ನು ದುಬೆ ಸಹಚರರು ಹತ್ಯೆ ಮಾಡಿದ್ದರು.

ಜುಲೈ 10 ರಂದು ಉಜ್ಜೈನ್ನಲ್ಲಿ ದುಬೆಯನ್ನು ಬಂಧಿಸಿದ ನಂತರ ಅವರನ್ನು ಮತ್ತೆ ಕಾನ್ಪುರಕ್ಕೆ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದುಬೆಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು