ಡಾ. ರಾಜ್ ಕುಮಾರ್ ಬಿಡುಗಡೆಗೆ ಕೋಟ್ಯಾಂತರ ರೂ. ವೀರಪ್ಪನ್ ಗೆ ಕೊಟ್ಟಿದ್ದ ಸರಕಾರ| 20 ವರ್ಷಗಳ ಬಳಿಕ ಸ್ಪೋಟಕ ಮಾಹಿತಿ ಬಹಿರಂಗ

veerappan
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(08-07-2021):  ಡಾ.ರಾಜ್ ಕುಮಾರ್​ ಅವರ ಬಿಡುಗಡೆಗಾಗಿ ಸರಕಾರ 15.22 ಕೋಟಿ ರೂ.ವನ್ನು ನೀಡಿತ್ತು ಎಂದು ಇದೀಗ ಬಹಿರಂಗವಾಗಿದೆ.

ಪತ್ರಕರ್ತ ಶಿವಸುಬ್ರಮಣ್ಯನ್ ಎಂಬವರು ಬರೆದ ‘ಲೈಫ್​ ಆಂಡ್ ಫಾಲ್​ ಆಫ್ ವೀರಪ್ಪನ್’ ಪುಸ್ತಕದಲ್ಲಿ 20 ವರ್ಷಗಳ ಬಳಿಕ ಡಾ.ರಾಜ್​ ಅಪಹರಣದ ಸ್ಫೋಟಕ ಮಾಹಿತಿಯನ್ನು ಅವರು ಉಲ್ಲೇಖಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ನೇತೃತ್ವದ ಸರ್ಕಾರ 15.22 ಕೋಟಿ ರೂ.ವನ್ನು ಕೊಟ್ಟಿ ವೀರಪ್ಪನ್ ಅವರಿಂದ ಡಾ. ರಾಜುಕುಮಾರ್ ಅವರನ್ನು ಬಿಡುಗಡೆಗೊಳಿಸಿದ್ದರು ಎನ್ನುವುದು ಪುಸ್ತಕದಲ್ಲಿದೆ. ಆದರೆ ಎಸ್ ಎಂ ಕೃಷ್ಣ ಈ ಬಗ್ಗೆ ಮೌನವಾಗಿದ್ದರು.

ಆನೆದಂತ ಚೋರ ವೀರಪ್ಪನ್ 2000 ವಿಷವಿಯ ಜುಲೈ 30ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್‌ಕುಮಾರ್ ಹಾಗೂ ಇನ್ನಿತರ ಮೂವರನ್ನು ಅಪಹರಿಸಿದ್ದ. ಆ ಬಳಿಕ 1000ಕೋಟಿಗೆ ಬೆಡಿಕೆ ಇಟ್ಟಿದ್ದ ಎನ್ನವುದು ಪುಸ್ತಕದಿಂದ ಬಹಿರಂಗವಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು