ಲಕ್ನೋ (30-10-2020): ಸಂವಿಧಾನ ಬದಲಿಸಿ, ಹಿಂದೂ ರಾಷ್ಟ್ರವೆಂದು ಘೋಷಿಸಲು ಸರಕಾರ ಸಜ್ಜುಗೊಳ್ಳುತ್ತಿದೆಯೆಂದೂ, ಅದರ ಮುನ್ನುಡಿಯಾಗಿ ಸಂವಿಧಾನದ ಪುಟಗಳ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಲಾಗಿದೆಯೆಂದೂ ತೋರಿಸುವ ವೀಡಿಯೋ ವೈರಲ್ ಆಗಿದೆ.
ಅಕ್ಟೋಬರ್ ಒಂಭತ್ತರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಒಂದು ಸಾರ್ವಜನಿಕ ಸಮಾರಂಭದಲ್ಲಿ ಈ ವೀಡಿಯೋ ಮಾಡಲಾಗಿದ್ದು, ಅದರಲ್ಲಿ ರಾಮರಾಜ್ಯದ ಕನಸಿನ ಸಂವಿಧಾನವು ಸಿದ್ಧಗೊಂಡಿದೆಯೆಂದು ಆರೋಪಿಸಲಾಗಿದೆ. ಇದರ ವಿರುದ್ಧ ಆಂದೋಲನ ನಡೆಸಬೇಕೆಂದು ಕರೆ ನೀಡಲಾಗಿದೆ.
ಸಂವಿಧಾನದ ಪುಟಗಳಲ್ಲಿ ರಾಮ, ಕೃಷ್ಣ, ಹನುಮಾನ್, ಕಾಳಿ, ದುರ್ಗಾ ಮುಂತಾದ ದೇವ ದೇವತೆಗಳ ಚಿತ್ರಗಳನ್ನು ಸೇರಿಸಲಾಗಿದ್ದು, 2024 ರಲ್ಲಿ ಸರಕಾರ ರಚನೆಗೊಂಡು ಇದನ್ನು ಜಾರಿಗೊಳಿಸಲಿದ್ದಾರೆ. ಯಾವ ಬೆಲೆ ತೆತ್ತಾದರೂ ಇದನ್ನು ತಡೆಯಬೇಕಿದೆಯೆಂದು ಹೇಳಲಾಗಿದೆ.
ಬಳಿಕ ಸಂವಿಧಾನದ ಪುಟಗಳನ್ನು ಒಂದೊಂದಾಯ ತೆರೆಯುತ್ತಾ ಅದರಲ್ಲಿರುವ ದೇವದೇವತೆಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಸಂವಿಧಾನದ ಈ ಪ್ರತಿಯು ಸದ್ಯ ದೇಶದ ಪ್ರಧಾನ ಮಂತ್ರಿ ಮತ್ತು ಕಾನೂನು ಮಂತ್ರಿಯ ಕೈಯ್ಯಲ್ಲಿದೆಯೆಂದೂ ವಿಡಿಯೋದಲ್ಲಿ ಹೇಳಲಾಗಿದೆ.ಪುಟಗಳನ್ನು ತೆರೆಯುತ್ತಿದ್ದಾಗ ಅದರಲ್ಲೊಂದು ಟಿಪ್ಪುಸುಲ್ತಾನನ ಚಿತ್ರವಿರುವುದು ಕಂಡು ಬರುತ್ತಿದೆ.
ಪ್ರೆಸ್ ಕನ್ನಡ ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಆಗಿ