ಬಿಗ್ ನ್ಯೂಸ್: ಮಾಜಿ ರಾಜ್ಯಪಾಲ ಆತ್ಮಹತ್ಯೆ

ex.governer
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿಮ್ಲಾ(08-10-2020): ನಾಗಾಲ್ಯಾಂಡ್ ನ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಮ್ಲಾದ ಬ್ರಾಕ್ ಹಾರ್ಸ್ಟ್ ನಲ್ಲಿರುವ ನಿವಾಸದಲ್ಲಿ ಸಿಬಿಐ ಮಾಜಿ ನಿರ್ದೇಶಕ ಹಾಗೂ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಈ ಘಟನೆಯನ್ನು ಶಿಮ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಮೋಹಿತ್ ಚಾವ್ಲಾ ದೃಢಪಡಿಸಿದ್ದಾರೆ. 2006ರಲ್ಲಿ ಹಿಮಾಚಲ ಪ್ರದೇಶದ ಡಿಜಿಪಿಯಾಗಿದ್ದ ಕುಮಾರ್, ನಂತರ 2008ರಿಂದ 2010ರ ನವೆಂಬರ್ ವರೆಗೆ ಸಿಬಿಐ ನಿರ್ದೇಶಕರಾಗಿದ್ದರು.ಬಳಿಕ ನಾಗಾಲ್ಯಾಂಡ್ ನ ರಾಜ್ಯಪಾಲರಾಗಿದ್ದರು.

ಪೊಲೀಸರ ಪ್ರಕಾರ, ಅಶ್ವನಿ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಂಜೆ ವಾಕ್ ಮಾಡಿದರು. ಅವರ ಶವ ಅವರ ಮನೆಯಲ್ಲಿ ಪ್ರಾರ್ಥನಾ ಕೊಠಡಿಯ ಬಳಿ ಪತ್ತೆಯಾಗಿದೆ. ಅವರ ಹೆಂಡತಿ, ಮಗ ಮತ್ತು ಮಗಳು – ಮನೆಯ ಕೆಳ ಮಹಡಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು