ಕರ್ನಾಟಕದ ಮುಸ್ಲಿಂ ಯುವಕನ ಮೇಲೆ ಯುಪಿ ಮತಾಂತರ ವಿರೋಧಿ ಕಾಯ್ದೆಯಡಿ ದೂರು ದಾಖಲು!

up police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉತ್ತರ ಪ್ರದೇಶ(19-01-2021): ತನ್ನ ಮಗಳನ್ನು ಅಪಹರಿಸಿ ಮತಾಂತರಕ್ಕೆ ಯತ್ನಿಸಿದ್ದಾರೆಂದು ಕರ್ನಾಟಕ ಮೂಲದ  22 ವರ್ಷದ ಮುಸ್ಲಿಂ ಯುವಕನ ವಿರುದ್ಧ ಉತ್ತರಪ್ರದೇಶದ ಯುವತಿಯೋರ್ವಳ ತಂದೆ ದೂರನ್ನು ನೀಡಿದ್ದು, ಆರೋಪವನ್ನು ಯುವತಿ ನಿರಾಕರಿಸಿದ್ದಾಳೆ.

19 ವರ್ಷದ ಯುವತಿಯೊಬ್ಬಳು ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಹೋಗಿದ್ದಾಗಿ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ.

ಯುವತಿಯನ್ನು ಗೋರಖ್‌ಪುರಕ್ಕೆ ಕರೆತರಲಾಗಿದೆ. ಆಕೆ  ಅಪಹರಣ ಅಥವಾ ಬಲವಂತವಾಗಿ ಮತಾಂತರ ಆರೋಪವನ್ನು ಅವಳು ನಿರಾಕರಿಸಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗೋರಖ್‌ಪುರ) ಮನೋಜ್ ಕುಮಾರ್ ಅವಸ್ಥಿ ಹೇಳಿದ್ದಾರೆ.

ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಕಾಯಲಾಗುತ್ತಿದೆ ಆದರೂ ಯುವತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ (ಗೋರಖ್‌ಪುರ) ಜೋಗೇಂದ್ರ ಕುಮಾರ್ ಅವರು ಮಾತನಾಡಿ, ಜನವರಿ 5 ರಂದು ಯುವತಿಯ  ತಂದೆ, ಮಗಳು ಕಾಣೆಯಾಗಿದ್ದಾರೆಂದು ಕೇಸ್ ದಾಖಲಿಸಿದ್ದಾರೆ. ಕೇಸ್ ನಲ್ಲಿ ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಸುಗ್ರೀವಾಜ್ಞೆಯಡಿ ಹೊಸ ಆರೋಪಗಳನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು