ಮೀರತ್(24-11-2020): ಗೋಣಿ ಚೀಲದಲ್ಲಿ ಮಗುವನ್ನು ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಗರದ ರಸ್ತೆಯೊಂದರ ಬಳಿ ನಡೆದಿದೆ.
ಗೋಣಿ ಚೀಲದಲ್ಲಿ ಮಗು ನರಳುವ ಸದ್ದು ಕೇಳಿ ದಾರಿಹೋಕರು, ಚೀಲವನ್ನು ತೆರೆದು ನೋಡಿದ್ದಾರೆ. ಈ ವೇಳೆ ಮಗು ಇರುವುದು ಪತ್ತೆಯಾಗಿದೆ. ಮಗುವನ್ನು ರಾತ್ರಿ ಎಸೆದಿರುವ ಸಾಧ್ಯತೆ ಇದೆ.
ಮಗುವಿನ ಹೊಕ್ಕಳು ಬಳ್ಳಿ ಆಗೆಯೇ ಇತ್ತು. ಹುಟ್ಟಿ ಒಂದು ದಿನವೂ ಆಗಿಲ್ಲ, ಆದರೆ ಮಗುವನ್ನು ಗೋಣಿ ಚೀಲದಲ್ಲಿ ಎಸೆದು ಹೋಗಲಾಗಿದೆ.